ಅಮಿತ್‌ ಶಾಗೆ ಬಂಡಲ್‌ ರಾಜ ಎಂದಿದ್ದ ವಿದ್ಯಾರ್ಥಿಯ ಅಮಾನತು ಆದೇಶ ವಾಪಸ್‌ ಪಡೆದ ಕಾಲೇಜ್‌

ಮಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಟೀಕಿಸಿದ್ದ ವಿದ್ಯಾರ್ಥಿಯ ಅಮಾನತು ಆದೇಶವನ್ನು ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಹಿಂಪಡೆದಿದೆ.

ಫೆಬ್ರವ ರಿ 20ರಂದು ವಿವೇಕಾನಂದ ಕಾಲೇಜಿಗೆ ಅಮಿತ್ ಶಾ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಅದೇ ಕಾಲೇಜಿನ ವಿದ್ಯಾರ್ಥಿ ಜಸ್ಟೀನ್ ಸೋಶಿಯಲ್‌ ಮೀಡಿಯಾದಲ್ಲಿ ಬಂಡಲ್‌ ರಾಜ ಎಂದು ಪೋಸ್ಟ್ ಮಾಡಿದ್ದ. ಇದರಿಂದಾಗಿ ಸಿಟ್ಟಿಗೆದ್ದಿದ್ದ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಒಂದು ವಾರ ಅಮಾನತು ಮಾಡಿತ್ತು. ಆದರೆ ಕಾಲೇಜಿನ ಈ ನಿರ್ಧಾರಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ವಿದ್ಯಾರ್ಥಿ ಹಾಗೂ ಆತನ ಪೋಷಕರ ಜೊತೆಗೆ ಚರ್ಚೆ ನಡೆಸಿ ಬಳಿಕ ಅಮಾನತು ಆದೇಶವನ್ನು ಹಿಂಪಡೆದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com