Vijay Hazare Trophy : ಸೌರಾಷ್ಟ್ರ ಮಣಿಸಿ ಚಾಂಪಿಯನ್ ಆದ ಕರ್ನಾಟಕ

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಮಂಗಳವಾರ ನಡೆದ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 41 ರನ್ ಗಳಿಂದ ಮಣಿಸಿದ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಟಾಸ್ ಗೆದ್ದ ಸೌರಾಷ್ಟ್ರ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ 45.5 ಓವರುಗಳಲ್ಲಿ 253 ಕ್ಕೆ ಆಲೌಟ್ ಆಯಿತು. ಕರ್ನಾಟಕದ ಮಯಂಕ್ ಅಗರವಾಲ್ 90, ಪವನ್ ದೇಶಪಾಂಡೆ 49 ಹಾಗೂ ಆರ್. ಸಮರ್ಥ್ 48 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಸೌರಾಷ್ಟ್ರ 46.3 ಓವರುಗಳಲ್ಲಿ 212 ಕ್ಕೆ ಆಲೌಟ್ ಆಯಿತು. ಸೌರಾಷ್ಟ್ರ ಪರವಾಗಿ ನಾಯಕ ಚೇತೇಶ್ವರ ಪೂಜಾರಾ ಅಜೇಯ 94 ಹಾಗೂ ಅವಿ ಬರೊಟ್ 30 ರನ್ ಗಳಿಸಿದರು. ಕರ್ನಾಟಕದ ಕೆ.ಗೌತಮ್ ಹಾಗೂ ಪ್ರಸಿಧ್ ಕೃಷ್ಣಾ ತಲಾ 3 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com