“Rahul Dravid For PM” : ಟ್ವೀಟಿಗರು ದ್ರಾವಿಡ್ ಭಾರತದ ಪ್ರಧಾನಿಯಾಗಲಿ ಅಂದಿದ್ದೇಕೆ..?

ನ್ಯೂಜಿಲೆಂಡ್ ನಲ್ಲಿ ನಡೆದ ಅಂಡರ್-19 ವಿಶ್ವಕಪ್ ನಲ್ಲಿ ಪೃಥ್ವಿ ಷಾ ನೇತೃತ್ವದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರಾಹುಲ್ ದ್ರಾವಿಡ್ ಅವರ ಕುರಿತು ಅಭಿಮಾನಿಗಳಿಂದ ಅಪಾರ ಪ್ರಶಂಸೆ ಕೇಳಿ ಬಂದಿತ್ತು.

ಕೋಚ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕಾರಣ ದ್ರಾವಿಡ್ ಅವರಿಗೆ ಬಿಸಿಸಿಐ 50 ಲಕ್ಷ ರೂ ಬಹುಮಾನದ ಮೊತ್ತವನ್ನು ಘೋಷಿಸಿತ್ತು. ತಂಡದ ಆಟಗಾರರಿಗೆ 20 ಲಕ್ಷ ಹಾಗೂ ಇತರೆ ಕೋಚ್ ಸಿಬ್ಬಂದಿಗೆ 30 ಲಕ್ಷ ನೀಡುವುದಾಗಿ ಹೇಳಿತ್ತು.

ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್, ಇತರೆ ಕೋಚ್ ಸಿಬ್ಬಂದಿಗೂ ಸಮಾನವಾದ ಸಂಭಾವನೆಯನ್ನು ನೀಡಬೇಕೆಂದು ಕೋರಿದರು. ಈ ಬಗ್ಗೆ ಮರು ಪರಿಶೀಲನೆ ನಡೆಸಿದ ಬಿಸಿಸಿಐ ದ್ರಾವಿಡ್ ವಿನಂತಿಯನ್ನು ಮನ್ನಿಸಿ ಎಲ್ಲ ಕೋಚಿಂಗ್ ಸ್ಟಾಫ್ ನವರಿಗೂ ಸಮವಾದ ಮೊತ್ತ ನೀಡಲು ಒಪ್ಪಿಕೊಂಡಿತು.

ತಂಡದ ಎಲ್ಲ ಕೋಚಿಂಗ್ ಸಿಬ್ಬಂದಿಗೂ ಸಮಾನ ಸಂಭಾವನೆ ಸಿಗುವಂತೆ ಮಾಡಿದ ರಾಹುಲ್ ಅವರ ನಿಸ್ವಾರ್ಥ ನಡೆ ಅಭಿಮಾನಿಗಳಲ್ಲಿ ಅವರ ಬಗೆಗಿನ ಗೌರವ ದ್ವಿಗುಣವಾಗುವಂತೆ ಮಾಡಿದೆ. ಆದುದರಿಂದ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಕೆಲ ಅಭಿಮಾನಿಗಳು, ಉದಾತ್ತ ಮನೋಭಾವದ ರಾಹುಲ್ ಭಾರತದ ಮುಂದಿನ ಪ್ರಧಾನಿಯಾಗಬೇಕೆಂದು ಟ್ವೀಟ್ ಮಾಡಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com