ನಲಪ್ಪಾಡ್‌ ಶಾಂತಿಪ್ರಿಯ, ಆತ ವಿದ್ವತ್‌ಗೆ ಹೊಡೆದಿಲ್ಲ…..ಹೀಗಂದಿದ್ದಾದರೂ ಯಾರು ?

ಬೆಂಗಳೂರು : ಶಾಸಕ ಹ್ಯಾರಿಸ್‌ ಪುತ್ರ ನಲಪ್ಪಾಡ್‌ ಒಬ್ಬ ಶಾಂತಿಯಿಂದಿರುವ ವ್ಯಕ್ತಿ. ಆತ ವಿದ್ವತ್‌ಗೆ ಏನೂ ಮಾಡಿಲ್ಲ. ವಿದ್ವತ್‌ ಕುಂಟುತ್ತಾ ಹೋಗಿ ಅವನೇ ನಲಪ್ಪಾಡ್‌ ಮೇಲೆ ಹಲ್ಲೆ ಮಾಡಿರುವುದಾಗಿ ಶಾಂತಿನಗರ ಕಾಂಗ್ರೆಸ್‌ ಕಾರ್ಪೋರೇಟರ್‌ ಸೌಮ್ಯ ಅವರ ಪತಿ ಶಿವಕುಮಾರ್‌ ಹೇಳಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಲಪ್ಪಾಡ್‌ ಪಾಪದ ವ್ಯಕ್ತಿ. ಆತ ಸದಾ ಶಾಂತಿಯಿಂದಿರುತ್ತಾನೆ. ವಿದ್ವತ್‌ ಕುಂಟುತ್ತಾ ಹೋಗಿ ನಲಪ್ಪಾಡ್ ಮೇಲೆ ವೈನ್‌ ಸುರಿದಿದ್ದಾನೆ. ಆಗಲೂ ನಲಪ್ಪಾಡ್ ಶಾಂತಿಯಿಂದಿದ್ದ. ಆದರೆ ಎರಡನೇ ಬಾರಿ ವೈನ್‌ ಸುರಿದಾಗ ಕೋಪಗೊಂಡ ನಲಪ್ಪಾಡ್‌ ವಿದ್ವತ್‌ಗೆ ಏಟು ಕೊಟ್ಟಿದ್ದಾನೆ. ಬಳಿಕ ವಿದ್ವತ್‌, ನಲಪ್ಪಾಡ್‌ಗೆ ಹೊಡೆದಿದ್ದಾನೆ. ಆಗ ಇದನ್ನೆಲ್ಲ ನೋಡುತ್ತಿದ್ದ ಜನ ವಿದ್ವತ್‌ಗೆ ಥಳಿಸಿರುವುದಾಗಿ ಹೇಳಿದ್ದಾರೆ.

ಹಣ ನೀಡಿ ನಲಪ್ಪಾಡ್‌ ಮೇಲೆ ಕೇಸ್‌ ದಾಖಲಿಸಿದ್ದಾರೆ. ಕುರಾನ್‌, ಬೈಬಲ್‌, ಭಗವದ್ಗೀತೆಯ ಮೇಲೆ ಬೇಕಾದರೂ ಪ್ರಮಾಣ ಮಾಡಿ ಹೇಳುತ್ತೇನೆ. ನಲಪ್ಪಾಡ್ ಕೆಟ್ಟವನಲ್ಲ ಎಂದಿದ್ದಾರೆ.

One thought on “ನಲಪ್ಪಾಡ್‌ ಶಾಂತಿಪ್ರಿಯ, ಆತ ವಿದ್ವತ್‌ಗೆ ಹೊಡೆದಿಲ್ಲ…..ಹೀಗಂದಿದ್ದಾದರೂ ಯಾರು ?

  • February 27, 2018 at 9:43 PM
    Permalink

    rubbish talks we are not seen any video’s of beating vidvath but nalpad attitude which were seen in news i\+t is enough for his behave.

    Reply

Leave a Reply

Your email address will not be published.

Social Media Auto Publish Powered By : XYZScripts.com