ನನ್ನ ಗಣಿ ವರದಿಯಲ್ಲಿ ಮೂವರು CM ಗಳ ಹೆಸರಿದೆ : ಹೊಸ ಬಾಂಬ್‌ ಸಿಡಿಸಿದ ಸಂತೋಷ್ ಹೆಗ್ಡೆ

ಗದಗ : ಇಂದು ನಾವು ಜೈಲಿಗೆ ಹೋಗಿ ಹೊರ ಬಂದವರಿಗೆ ಮಾಲೆ ಹಾಕಿ ಗೌರವಿಸುತ್ತಿದ್ದೇವೆ. ನಮ್ಮಿಂದ ಆಯ್ಕೆಯಾದವರು ನಮ್ಮನ್ನೇ ನೀವು ಯಾರು ಎಂದು ಕೇಳುವಂತಾಗಿದೆ. ಇಂತಹ ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಿರ್ಮಾಣವಾಗಬೇಕು. ಅಂತಹ ಸಮಾಜವನ್ನು ನಿರ್ಮಿಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಹೇಳಿದ್ದಾರೆ.

ಗದಗನಲ್ಲಿ ನಡೆದ ಜನಾಂದೋಲನಗಳ ಮಹಾಮತ್ರಿ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆ, ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಅನ್ನುವಂತಾಗಿದೆ.ಯಾವುದೇ ಹಗರಣ ಬಯಲಿಗೆ ಬಂದರೂ ಅಲ್ಲಿ ಕಾರ್ಯಾಂಗದ ವ್ಯಕ್ತಿಯ ಹಸ್ತಕ್ಷೇಪವಿರುತ್ತದೆ. ಮೇಲ್ಮನವಿಗಳ ಮೂಲಕವೇ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಳಂಬವಾಗುತ್ತಿದೆ. ಮಾದ್ಯಮಗಳು ಹಣ ಪಡೆದು ಸುಳ್ಳು ವರದಿ ಮಾಡುತ್ತಿವೆ. ಎಲ್ಲಿದೆ ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗದಲ್ಲಿ ನ್ಯಾಯ? ಎಂದು ಪ್ರಶ್ನಿಸಿದ್ದಲ್ಲದೆ, ನಮ್ಮಲ್ಲಿರೋ ಮೌಲ್ಯ ಕುಸಿತವೇ ಇದಕ್ಕೆ ಕಾರಣ.ಸಮಾಜ ಬದಲಾಯಿಸಿ ಸಂವಿಧಾನಕ್ಕೆ ಗೌರವ ತರಬೇಕಿದೆ.ನನ್ನ ಗಣಿ ವರದಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳ ಹೆಸರಿದೆ.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಮೂವರು ಸಿಎಂ ಇದ್ದಾರೆ. 7 ಜನ ಮಂತ್ರಿಗಳು, ಐಎಎಸ್, ಐಪಿಎಸ್ ಸೇರಿ 87 ಜನ ಅಧಿಕಾರಿಗಳಿದ್ದಾರೆ. ಅಕ್ರಮ ಗಣಿಗಾರಿಕೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಬಗ್ಗೆ ವರದಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com