ಕಾವೇರಿ ನದಿ ನೀರು ಹಂಚಿಕೆ ವಿವಾದ : ಕನ್ನಡಿಗರಿಗೆ ಸಿಹಿಸುದ್ದಿ ಕೊಟ್ಟ ಸಚಿವ ನಿತಿನ್‌ ಗಡ್ಕರಿ

ದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂದ ನದಿ ನೀರು ನಿರ್ವಹಣಾ ಮಂಡಳಿ ರಚನೆ ತಕ್ಷಣಕ್ಕೆ ಅಸಾಧ್ಯ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಕರ್ನಾಟಕ ಹಾಗೂ ತಮಿಳುನಾಡು ನದಿ ವಿವಾದ ಸಂಬಂಧ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿತ್ತು,. ಇದಕ್ಕೆ ಪ್ರತಿಕ್ರಿಯಿಸಿರುವ ನಿತಿನ್‌ ಗಡ್ಕರಿ, ಈ ವಿಚಾರ ಬಹಳ ಸೂಕ್ಷ್ಮವಾದುದು. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಜಾರಿ ಮಾಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿರುವುು ಸರ್ಕಾರದ ಗಮನಕ್ಕೆ ಬಂದಿದೆ. ಮಂಡಳಿ ರಚನೆ ಮಾಡುವುದು ಸುಲಭದ ವಿಚಾರವಲ್ಲ. ತಮಿಳುನಾಡು ಇದರಲ್ಲಿ ಆಸಕ್ತಿ ವಹಿಸಿದೆ. ಆದರೆ ಕರ್ನಾಟಕಕ್ಕೆ ಇದು ಬೇಕಿಲ್ಲ. ಎರಡೂ ರಾಜ್ಯಗಳು ವ್ಯತಿರಿಕ್ತ ಅಭಿಪ್ರಾಯ ಹೊಂದಿರುವ ಕಾರಣ ಸಮಸ್ಯೆ ಪರಿಹಾರ ಸುಲಭದ ಮಾತಲ್ಲ. ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಂಬಂಧಪಟ್ಟ ರಾಜ್ಯಗಳ ಅನುಮತಿ ಪಡೆಯುವುದಾಗಿ ಹೇಳಿದ್ದಾರೆ.

ಅಲ್ಲದೆ ನಮಗೆ ಕರ್ನಾಟಕ, ತಮಿಳುನಾಡು ಬೇರೆಯಲ್ಲ. ಎರಡೂ ರಾಜ್ಯಗಳು ನಮಗೆ ಎರಡು ಕಣ್ಣಿದ್ದಂತೆ. ಸುಪ್ರೀಂ ತೀರ್ಪನ್ನು ನಾವು ಗೌರವಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com