Cricket : ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ Morne Morkel

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಮಾರ್ನ್ ಮಾರ್ಕೆಲ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಗುರುವಾರ ಆರಂಭವಾಗಲಿರುವ ಟೆಸ್ಟ್ ಸರಣಿಯ ನಂತರ ಮಾರ್ನ್ ಮಾರ್ಕೆಲ್ ವಿದಾಯ ಹೇಳಲಿದ್ದಾರೆ.

ನಿವೃತ್ತಿ ಘೋಷಿಸಿದ 33 ವರ್ಷದ ಮಾರ್ಕೆಲ್ ‘ ಇದು ನನ್ನ ಪಾಲಿಗೆ ಅತ್ಯಂತ ಕಠಿಣವಾದ ನಿರ್ಧಾರವಾಗಿತ್ತು. ಆದರೆ ಬದುಕಿನಲ್ಲಿ ಹೊಸ ಅಧ್ಯಾಯ ಶುರು ಮಾಡಲು ಇದು ಸರಿಯಾದ ಸಮಯ ಎಂದು ಅನಿಸುತ್ತಿದೆ. ನನ್ನದೇ ಆದ ಪರಿವಾರವಿದ್ದು, ಅವರ ಕಡೆಗೆ ಹೆಚ್ಚಿನ ಗಮನ ಕೊಡುವುದು ಮುಖ್ಯವಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ನ ವೇಳಾಪಟ್ಟಿ ಆಟಗಾರರ ಮೇಲೆ ಒತ್ತಡ ನಿರ್ಮಿಸುತ್ತಿದೆ. ನಿವೃತ್ತಿ ನಿರ್ಧಾರದಿಂದ ವೈಯಕ್ತಿಕ ಬದುಕಿನಲ್ಲಿ ಲಾಭವಾಗಲಿದೆ ಎಂದು ಅಂದುಕೊಳ್ಳುತ್ತೇನೆ ‘ ಎಂದಿದ್ದಾರೆ.

ಮಾರ್ನ್ ಮಾರ್ಕೆಲ್ ದಕ್ಷಿಣ ಆಫ್ರಿಕಾ ಪರವಾಗಿ ಇದುವರೆಗೆ 83 ಟೆಸ್ಟ್ ಪಂದ್ಯಗಳನ್ನಾಡಿ 294 ವಿಕೆಟ್ ಹಾಗೂ 117 ಏಕದಿನ ಪಂದ್ಯಗಳನ್ನಾಡಿ 188 ವಿಕೆಟ್ ಪಡೆದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com