Cricket : ಕಿಂಗ್ಸ್ XI ಪಂಜಾಬ್ ನಾಯಕನಾಗಿ R Ashwin ನೇಮಕ

ಇಂಡಿಯನ್ ಪ್ರಿಮಿಯರ್ ಲೀಗ್ ನ 11 ನೇ ಆವೃತ್ತಿಯಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ. ‘ ಪ್ರತಿಭಾವಂತ ಆಟಗಾರರ ಪಡೆಯನ್ನು ಮುನ್ನಡೆಸುವ ಜವಾಬ್ದಾರಿ ದೊರೆತಿರುವುದಕ್ಕೆ ಸಂತಸವಾಗಿದೆ ‘ ಎಂದು ಅಶ್ವಿನ್ ಹೇಳಿದ್ದಾರೆ.

ಜನೆವರಿಯಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆರ್ ಅಶ್ವಿನ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ 7.60 ಕೋಟಿ ನೀಡಿ ಖರೀದಿಸಿತ್ತು. 2009 ರಿಂದ 2015 ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದ ಆರ್.ಅಶ್ವಿನ್, ಚೆನ್ನೈ ತಂಡ ನಿಷೇಧಗೊಂಡ ಬಳಿಕ 2 ವರ್ಷ ಪುಣೆ ಸೂಪರ್ ಜಿಯಾಂಟ್ಸ್ ತಂಡದಲ್ಲಿ ಆಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com