ಜೈಲಿನಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಸೈಕೋ ಶಂಕರ

ಬೆಂಗಳೂರು : ತಮಿಳುನಾಡು ಹಾಗೂ ಕರ್ನಾಟಕ ಈ ಎರಡೂ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಬಂಧಿಯಾಗಿದ್ದ ಅಪರಾಧಿ ಸೈಕೋ ಶಂಕರ್‌ ಸೋಮವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸೈಕೋ ಶಂಕರ್‌ನನ್ನು ಜೈಲಿನ ವಿಶೇಷ ಭದ್ರತಾ ಕೊಠಡಿಯಲ್ಲಿರಿಸಲಾಗಿತ್ತು. ಈ ವೇಳೆ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜೈಲಿನ ಮೂಲಗಳು ತಿಳಿಸಿವೆ. ಕತ್ತು ಕೊಯ್ದುಕೊಂಡು ನರಳಾಡುತ್ತಿದ್ದ ಈತನನ್ನು ಭದ್ರತಾ ಸಿಬ್ಬಂದಿ ಗಮನಿಸಿ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ತಮಿಳುನಾಡಿನ ಸೇಲಂ ಜಿಲ್ಲೆಯವರನಾದ ಸೈಕೋ ಶಂಕರ್‌ 20ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿದ್ದ. ಅಲ್ಲದೆ ಈಚ 2013ರಲ್ಲಿ ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡು ಪೊಲೀಸರಿಗೆ ತಲೆನೋವು ತಂದಿಟ್ಟಿದ್ದ. ಅನೇಕ ದಿನಗಳ ಹುಡುಕಾಟದ ಬಳಿಕ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದು, ಕಂಬಿ ಎಣಿಸುತ್ತಿದ್ದ.

Leave a Reply

Your email address will not be published.

Social Media Auto Publish Powered By : XYZScripts.com