ಯುವಿಯನ್ನು ಕಡೆಗಣಿಸಿ ಅಶ್ವಿನ್ ರನ್ನು ಕ್ಯಾಪ್ಟನ್ ಮಾಡಿದ್ದೇಕೆ..? : Sehwag ಹೇಳಿದ್ದೇನು..?

ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಆವೃತ್ತಿಗೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರವಿಚಂದ್ರನ್ ಅಶ್ವಿನ್ ಅವರನ್ನು ತನ್ನ ನಾಯಕನನ್ನಾಗಿ ಸೋಮವಾರ ಘೋಷಣೆ ಮಾಡಿದೆ. ಜನೆವರಿಯಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅಶ್ವಿನ್ ಅವರನ್ನು 7.60 ಕೋಟಿ ನೀಡಿ ಖರೀದಿಸಿದ ಪಂಜಾಬ್ ಫ್ರಾಂಚೈಸಿ, ನಾಯಕನಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸಹ ವಹಿಸಿದೆ.

ತಂಡದಲ್ಲಿದ್ದ ಅನುಭವಿ ಯುವರಾಜ್ ಸಿಂಗ್ ಅವರನ್ನು ಕಡೆಗಣಿಸಿ ಅಶ್ವಿನ್ ರನ್ನು ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಕಾರಣವೇನು..? ಇದಕ್ಕೆ ಕಿಂಗ್ಸ್ ಇಲೆವನ್ ತಂಡದ ಮೆಂಟರ್ ಆಗಿರುವ ವೀರೆಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ.

‘ ನಾಯಕನ ಸ್ಥಾನಕ್ಕೆ ಯುವಿ ಹೆಸರನ್ನು ಕೂಡ ಪರಿಗಣಿಸಿದ್ದೆವು. ಆದರೆ ನಾವು ದೀರ್ಘಾವಧಿಗಾಗಿ ಕ್ಯಾಪ್ಟನ್ ಆಯ್ಕೆ ಮಾಡಲು ಬಯಸಿದ್ದೆವು. ಒಬ್ಬ ಬೌಲರ್ ತಂಡದ ಕ್ಯಾಪ್ಟನ್ ಆಗುವುದನ್ನು ನಾನು ಬೆಂಬಲಿಸುತ್ತೇನೆ. ಯಾಕೆಂದರೆ ಒಬ್ಬ ಬೌಲರ್, ಬ್ಯಾಟ್ಸಮನ್ ಗಿಂದ ಚೆನ್ನಾಗಿ ಆಟದ ಬಗ್ಗೆ ಅರಿತಿರುತ್ತಾನೆ ‘

ಮುಂಚೆಯಿಂದಲೂ ಕಪಿಲ್ ದೇವ್, ವಕಾರ್ ಯೂನಿಸ್, ವಾಸಿಮ್ ಅಕ್ರಮ್ ಅವರ ಅಭಿಮಾನಿಯಾಗಿದ್ದೇನೆ. ಶ್ರೇಷ್ಟ ಬೌಲರುಗಳಾಗಿದ್ದ ಇವರುಗಳು, ಒಳ್ಳೆಯ ನಾಯಕರೂ ಆದರು. ಅಶ್ವಿನ್ ಕೂಡ ಪಂಜಾಬ್ ಪರವಾಗಿ ಅದ್ಭುತವನ್ನು ಸೃಷ್ಟಿಸಲಿದ್ದಾರೆ ಎಂದು ನಿರೀಕ್ಷಿಸುತ್ತೇನೆ ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com