BJP ಸ್ಪಷ್ಟ ಬಹುಮತ ಪಡೆಯುತ್ತೆ, BSY ಸಿಎಂ ಆಗ್ತಾರೆ : ಶ್ರೀರಾಮುಲು

ಕೊಪ್ಪಳ : ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಸಂಸದ ಬಿ ಶ್ರೀರಾಮುಲು ಭೇಟಿ ನೀಡಿದರು. ‘ ಸಹೋದರ ಜನಾರ್ದನ ರಡ್ಡಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಈ ಕುರಿತು ಅವರೇ ಹೇಳಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅವರು ತೊಡಗಲಿದ್ದಾರೆ. ಬಳ್ಳಾರಿಗೆ ಜನಾರ್ದನ ರಡ್ಡಿ ಬಾರದಂತೆ ಕೋರ್ಟ್ ನಿರ್ಬಂಧ ಹಾಕಿದೆ.

ಹಾಗಾಗಿ ಆನೆಗೊಂದಿ ಹಾಗೂ ಚಿತ್ರದುರ್ಗ ಭಾಗದಲ್ಲಿ ವಾಸ್ತವ್ಯಕ್ಕೆ ಮನೆ ನೋಡಿದ್ದರು. ಜನಾರ್ದನ ರೆಡ್ಡಿ ಅವರನ್ನು ಅನೀಲ್ ಸಂಪರ್ಕ ಮಾಡಿದ ವಿಚಾರ ನನಗೆ ಗೊತ್ತಿಲ್ಲ. ಜನಾರ್ದನ ರೆಡ್ಡಿ ಹಠವಾದಿ ವ್ಯಕ್ತಿ. ಅವರು ಕಾಂಗ್ರೆಸ್ ಗೆ ಸೇರಲ್ಲ. ಸಂಸದರ ಪೈಕಿ ಬಿಎಸ್ವೈ ಒಬ್ಬರಿಗೆ ವಿಧಾನಸಭಾ ಟಿಕೆಟ್ ಪಕ್ಕಾ. ಉಳಿದ ಸಂಸದರಿಗೆ ಟಿಕೆಟ್ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಆನಂದ ಸಿಂಗ್ ಗೆ ಬಿಜೆಪಿ ಎಲ್ಲ ಅನುಕೂಲ ಮಾಡಿ ಕೊಟ್ಟಿತ್ತು. ಅವರ ಪಾಪದ ಕೊಡ, ದುರಂಕಾರ ಹೆಚ್ಚಾದ ಮೇಲೆ ಕಾಂಗ್ರೆಸ್ ಸೇರಿದ್ದಾರೆ. ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್ ೬೦, ಜೆಡಿಎಸ್ ೨೦ ಸ್ಥಾನ ಪಡೆಯುತ್ತೆ. ನಾನು ಹುಲಿಗೆಮ್ಮ ದೇವಿ‌ ದೇವಸ್ಥಾನದಲ್ಲಿ ನಿಂತು ಈ ಮಾತು ಹೇಳ್ತಿದ್ದೇನೆ.

ಬಿಜೆಪಿ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆಯುತ್ತೆ. ಯಡಿಯೂರಪ್ಪ ಸಿಎಂ ಆಗ್ತಾರೆ. ಸಿಎಂ ಸಿದ್ದರಾಮಯ್ಯನಿಗೆ ದುರಂಕಾರ, ಅಹಂಕಾರ ಹೆಚ್ಚಾಗಿದೆ. ಅತಿ ಹೆಚ್ಚು ಹಣ ಗಳಿಕೆ ಮಾಡಿದ್ದಾರೆ. ಈಗ ಅವರು ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಅವರಿಗೆ ಅಹಿಂದ ವರ್ಗದ ನೋವು ಕಾಣಲ್ಲ.

ಎಸ್ ಎಸ್ಟಿಗೆ ಮೀಸಲಿಟ್ಟ ಹಣ ಬೇರೆಯದಕ್ಕೆ ಬಳಸಿದ್ದಾರೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದ್ರೆ ಎಲ್ಲರೂ ಮೋದಿ ಮೋದಿ ಅಂತಾ ಕೂಗ್ತಿದ್ದಾರೆ. ಮೋದಿ ವರ್ಚಸ್ಸು ಹೇಗಿದೆ ಎನ್ನೋದು ಗೊತ್ತಾಗುತ್ತೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಈಗ ಬಸವಣ್ಣನ ವಚನ ಹೇಳ್ತಿದ್ದಾರೆ. ೬೦ ವರ್ಷದ ಆಡಳಿತದ ನಡೆಸಿದ ಕಾಂಗ್ರೆಸ್. ಬಸವಣ್ಣನ ಕಾಯಕವೇ ಕೈಲಾಸ ಏಕೆ ನೆನಪಾಗಲಿಲ್ಲ.

‘ ಡಿಸಿಎಂ ಹುದ್ದೆ ಘೋಷಿಸುವಂತೆ ನಾನೇನು ಬಿಜೆಪಿ ಹೈಕಮಾಂಡ್ ಗೆ ಕೇಳಿಲ್ಲ. ಆದರೆ ನನ್ನ ಮೇಲಿನ ಅಭಿಮಾನದಿಂದ ಜನರು ಕೇಳುತ್ತಿರಬಹುದು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದೆ. ಅಂತ ಬೇಡಿಕೆಗೆ ಅವಕಾಶವಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದೆ ನಮ್ಮ ಧ್ಯೇಯ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com