ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ : ದುಬೈನ Khaleej Times ವರದಿಯಲ್ಲಿ ಏನಿದೆ..?

ಭಾನುವಾರ ಬೆಳಿಗ್ಗೆ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಶ್ರೀದೇವಿ ಮರಣದ ಸುದ್ದಿ ಬಾಲಿವುಡ್ ಗಣ್ಯರನ್ನು ಸೇರಿದಂತೆ ಚಿತ್ರ ರಸಿಕರಿಗೆಲ್ಲ ಶಾಕ್ ನೀಡಿತ್ತು. ಜಗತ್ತಿನ ಬಹುತೇಕ ಎಲ್ಲ ಮಾಧ್ಯಮಗಳಲ್ಲಿ ಶ್ರೀದೇವಿ ನಿಧನ ಹೊಂದಿದ್ದು ಹೃದಯಾಘಾತದಿಂದ ಎಂದು ವರದಿ ಮಾಡಿದ್ದವು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿದೆ..? ದುಬೈನ ಸ್ಥಳೀಯ ಮಾಧ್ಯಮಗಳ ವರದಿ ಏನು ಹೇಳುತ್ತೆ..?

ದುಬೈನ ಸ್ಥಳೀಯ ಮಾಧ್ಯಮಗಳು ಶ್ರೀದೇವಿ ಸಾವಿಗೀಡಾಗಿದ್ದು ಹೃದಯಾಘಾತದಿಂದಲ್ಲ, ಬದಲಾಗಿ ‘ ಆ್ಯಕ್ಸಿಡೆಂಟಲ್ ಡ್ರೌನಿಂಗ್ ‘ ‘ ಆಕಸ್ಮಿಕ ಮುಳುಗುವಿಕೆ ‘ ಯಿಂದ ಎಂದು ವರದಿ ಮಾಡಿವೆ.

ಶ್ರೀದೇವಿ ಸೇರಿದಂತೆ ಬೋನಿ ಕಪೂರ್ ಅವರ ಇಡೀ ಪರಿವಾರ ಸಂಬಂಧಿಕರೊಬ್ಬರ ಮದುವೆಯಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ದುಬೈನ ಜುಮೇರಾ ಟಾವರ್ಸ್ ಹೋಟೇಲಿನಲ್ಲಿ ತಂಗಿದ್ದರು. ‘ ತಾವು ತಂಗಿದ್ದ ಹೋಟೇಲಿನಲ್ಲಿ, ಸ್ನಾನ ಮಾಡಲೆಂದು ಬಾತ್ ರೂಮಿಗೆ ತೆರಳಿದ್ದಾರೆ. ದುರದೃಷ್ಟವಶಾತ್ ಅಲ್ಲಿ ಕಾಲು ಜಾರಿ ಬಾತ್ ಟಬ್ ನಲ್ಲಿ ಬಿದ್ದಿದ್ದಾರೆ. ನಂತರ ತಲೆಗೆ ಪೆಟ್ಟಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ‘ ಎಂದು ಖಲೀಜ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

‘ ಶ್ರೀದೇವಿ ಬಾತ್ ರೂಮಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಹೋಟೆಲ್ ಸಿಬ್ಬಂದಿ ವೀಕ್ಷಿಸಿದ್ದಾರೆ ‘ ಎಂದೂ ಸಹ ಅದರಲ್ಲಿ ಹೇಳಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com