ರೈ ಅವರಂತಹ ಅಪ್ರಸ್ತುತರ ಕ್ಷುಲ್ಲಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ : ಪ್ರತಾಪ್ ಸಿಂಹ

‘ ನಟ ಪ್ರಕಾಶ್ ರೈ ಅವರಂತಹ ಅಪ್ರಸ್ತುತರ ಕ್ಷುಲ್ಲಕ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ‘ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಪ್ರತಾಪ್ ಸಿಂಹ ಸೊಂಟದ ಕೆಳಗೆ ಮಾತನಾಡುತ್ತಾರೆ ಎಂಬ ನಟ ಪ್ರಕಾಶ್ ರೈ ಹೇಳಿಕೆಗೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ‘ ಜನ ಅಭಿವೃದ್ಧಿ ಕೆಲಸ ಮಾಡಲು ನನಗೆ ಮತ ಹಾಕಿ ಕಳಿಸಿದ್ದಾರೆ. ಅಭಿವೃದ್ಧಿ ಕಾರ್ಯ ಮಾಡಲು ಬೇಕಾದಷ್ಟಿದೆ. ಆದ್ದರಿಂದ ಅಪ್ರಸ್ತುತರ ಕ್ಷುಲ್ಲಕ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ‘ ಎಂದರು.

ಇನ್ನು ರಾಹುಲ್ ಗಾಂಧಿ ಕನ್ನಡ ಮಾತನಾಡುವ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ‘ ಅವರು ಕನ್ನಡ ಮಾತನಾಡಲಿ. ಆದರೆ ಕನ್ನಡ ಮಾತನಾಡುವ ಭರದಲ್ಲಿ ವಚನ ಹಾಗೂ ಕನ್ನಡದ ಕಗ್ಗೊಲೆಯಾಗಬಾರದು ‘ ಎಂದು ಟೀಕಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com