ನಲಪಾಡ್ ಪ್ರಕರಣದಲ್ಲಿ ಮುಜುಗರವಾಗಿದೆ, ರಾಕ್ಷಸೀ ಕೃತ್ಯಕ್ಕೆ ನನ್ನ ವಿರೋಧವಿದೆ : ಪ್ರಕಾಶ್ ರೈ

‘ ಮೈಸೂರು ನನ್ನ ಸಾಂಸ್ಕೃತಿಕ ನಗರ. ನಾನೂ ಸಿನಿಮಾದಲ್ಲಿ ಮಾತ್ರ ವಿಲನ್. ಕೆಲ ಪತ್ರಕರ್ತರಿಗೂ ವಿಲನ್. ನನ್ನ-ನಿಮ್ಮ ಸಂವಾದ ಕೊನೆಗೆ ಜನ ನೋಡ್ತಾರೆ ‘ ಮೈಸೂರಿನ ಮಾಧ್ಯಮ ಸಂವಾದದಲ್ಲಿ ನಟ ಪ್ರಕಾಶ್ ರೈ ಹೇಳಿಕೆ ನೀಡಿದ್ದಾರೆ.

ಓರ್ವ ನಟನಾಗಿ ಮಾತ್ರ ಗುರುತಿಸುವುದಲ್ಲ. ನನ್ನ ಓರ್ವ ವ್ಯಕ್ತಿಯಾಗಿ ಗುರ್ತಿಸಬೇಕಿದೆ. ಭಾರತದ ಮಾಧ್ಯಮಗಳು ನನಗೆ ಸೇತುವೆ ಆಗಿದೆ. ಅದರಲ್ಲಿ ಕೆಲವರಿಗ ನನಗೂ ಭಿನ್ನಾಭಿಪ್ರಾಯ ಇರಬಹುದು. ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿದೆ. ಮೈಸೂರಿನಲ್ಲಿ ನಟ ಪ್ರಕಾಶ್ ರೈ ಹೇಳಿಕೆ.

‘ ನಲಪಾಡ್ ಪ್ರಕರಣದಲ್ಲಿ ನಿಜವಾಗಿಯೂ ಮುಜುಗರವಾಗಿದೆ. ಒಂದು ಗ್ರಾಮ ತೆಗೆದುಕೊಳ್ಳಲು ಹಣ ನೀಡಿದ್ದರು. ಆ ಕ್ಷಣದಲ್ಲಿ ಈ ರೀತಿಯ ಯುವಕರು ಇರಬೇಕು ಎಂದಿದ್ದೆ. ಈ ರೀತಿಯ ಗುಣ ಬೆಳೆಸಿಕೊಳ್ಳಬೇಕು ಎಂದಿದ್ದೆ. ಆದ್ರೆ ಆತನ ಮನದಲ್ಲಿ ರಾಕ್ಷಸ ಇದ್ದಾನೆಂದು ಗೊತ್ತಿರಲಿಲ್ಲ. ಇನ್ಮುಂದೆ ಯಾರನ್ನಾದರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವ ಪರ ತಿಳಿದು ಮಾತನಾಡುತ್ತೇನೆ. ನನ್ನನ್ನ ಪ್ರೀತಿಸುತ್ತಿರುವ ಜನ್ರಿಗೆ ಕ್ಷಮೆ ಕೇಳುತ್ತೇನೆ ‘

‘ ಯಾವ ಧರ್ಮದವರು ಕೋಮುವಾದ‌ ಮಾಡಿದರೆ ತಪ್ಪು. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಯಾರು ಕೋಮುವಾದ‌‌‌ ಮಾಡಿದರು ತಪ್ಪು. ಹಿಂದೂ ಮುಸ್ಲಿಂ ಎನ್ನಬೇಡಿ, ಮನುಷ್ಯರು ಅಂತ ಹೇಳಿ. ಅನಂತ ಕುಮಾರ್ ಹೆಗ್ಗಡೆಯಂತವ್ರ ರಾಕ್ಷಸ ತನ. ನಲಪಾಡ್ ನಂತವ್ರ ರಾಕ್ಷಸ ತನ. ಇಂತವರ ಕೃತ್ಯಗಳಿಗೆ ನನ್ನ ವಿರೋಧವಿದೆ ‘ ಎಂದಿದ್ದಾರೆ.

ನನಗೆ ಸ್ವಲ್ಪ ಭಯವಾಗಿದೆ. ಗೌರಿ ಹತ್ಯೆ ನನ್ನನ್ನ ಅಪ್ಸೆಟ್ ಮಾಡಿತ್ತು. ಈಗಾಗಿ ಕಂಫರ್ಟ್ ಲೈಪ್ ಬಿಟ್ಟು ಹೋರಾಟದ ಹಾದಿ ಹಿಡಿದಿದ್ದೇನೆ. ಅದರಿಂದ ಹೊರ ಬರಲು ಸಾಧ್ಯವಾಗದಷ್ಟು ಅಪ್ಸೆಟ್ ಆಗಿದ್ದೆ. ನೀನೂ ಕ್ರಿಶ್ಚಿಯನ್.? ನೀನೂ ಜಾತ್ಯತೀತ.? ನೀನೂ ಕಾಂಗ್ರೆಸ್ ಏಜೆಂಟ್.? ಹೀಗೆಲ್ಲ ಕೋಮು ದಳ್ಳುರಿ ವ್ಯಕ್ತಪಡಿಸುತ್ತಿದ್ದಾರೆ. ನಾವು ಯಾವ ಸಮಾಜದಲ್ಲಿ ಇದ್ದೇವೆ ಅಂತ ಪ್ರಶ್ನೆಯಾಗಿದೆ. ನಾನೂ ಭಾರತೀಯ ಪ್ರಜೆ. ನೀವೂ ನನ್ನ ಪ್ರಶ್ನೆ ಮಾಡೋ ಅಧಿಕಾರವಿದೆ.
ಆದರೆ ಈ ಎಲ್ಲಾ ಘಟನೆಯನ್ನ ರಾಜಕೀಯವಾಗಿ ಬಿಂಬಿಸಿದ್ದಾರೆ.

ನಾನು ಪ್ರಜೆಯಾಗಿ ಮಾತಾಡುತ್ತಿದ್ದೇನೆ. ನಾನೂ ಎಡಪಂಥೀಯನಾಗಿ ಧ್ವನಿ ಎತ್ತಿದ್ದು ನಿಜ. ಯಾವುದು ತಪ್ಪು ಎನಿಸುತ್ತಿದೆಯೋ ಅದರ ವಿರುದ್ಧ ಹೋರಾಟಕ್ಕೆ ಇಳಿದಿದ್ದೇನೆ. ನಾನೂ ಧೋರಣೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ನಾನೂ ರೈಟೂ ಅಲ್ಲ ಲೆಫ್ಟೂ ಅಲ್ಲ. ನಾನೂ ಮೂರನೇ ಸಿದ್ದಾಂತಕ್ಕೆ ಸೇರಿದವನು.
ಮೈಸೂರಿನ ಮಾಧ್ಯಮ ಸಂವಾದದಲ್ಲಿ ಪ್ರಕಾಶ್ ರೈ ಹೇಳಿಕೆ.

ಇತ್ತಿಚ್ಚಿಗೆ ಸೊಂಟದ ಕೆಳಗೆ ಮಾತನಾಡುವವರೇ ಹೆಚ್ಚು. ಸಂಸದ ಪ್ರತಾಪ್ ಸಿಂಹ ಅವ್ರು ಕೆಟ್ಟದಾಗಿ ಮಾತಾಡುತ್ತಾರೆ. ನನ್ನ ಪತ್ನಿ ವಿರುದ್ಧವೇ ಕೆಟ್ಟದಾಗಿ ಮಾತಾಡುತ್ತಾರೆ. ಅವ್ರಿಗೆ ಆ ಪಕ್ಷದವ್ರು ಹಾಗೆ ಮಾತಾಡಬಾರದು ಎನ್ನಬಹುದು. ಯಾಕೆ ಸಂಸದರಿಗೆ ಹೀಗೆಲ್ಲ ಮಾತಾಡಬೇಡಿ ಎನ್ನುತ್ತಿಲ್ಲ. ಅವ್ರಿಗೆ ಉತ್ತರ ಕೊಡೋಕೆ ಹೇಳಿ ಸ್ವಾಮಿ. ಯಾಕೆ ಹೀಗೆಲ್ಲ ಸೊಂಟದ ಕೆಳಗಿನ ಮಾತೆ ಆಡ್ತಾರೆ. ಇದಕ್ಕೆ ನಾನೂ ಮರು ಉತ್ತರ ಕೊಡೋದಾದ್ರು ಹೇಗೆ.?
ಮೈಸೂರಿನ ಮಾಧ್ಯಮ ಸಂವಾದದಲ್ಲಿ ಇತ್ತೀಚೆಗಿನ ಘಟನೆಗಳ ವಿರುದ್ಧ ರೈ ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com