ಅಕ್ರಮ ಗಣಿಗಾರಿಕೆ ಹೆಸರಲ್ಲಿ ಪ್ರಕೃತಿ ಮೇಲೆ ಬಲಾತ್ಕಾರ ನಡೆಯುತ್ತಿದೆ : HDK

ಬಳ್ಳಾರಿ : ಮಾಜಿ ಸಿಎಂ ಕುಮಾರ ಸ್ವಾಮಿ ಸಂಡೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಸಂಡೂರಿನ ಆರಾಧ್ಯ ದೈವ ಕುಮಾರಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿದ ನಂತರ ಮಾತನಾಡಿದ ಅವರು ‘ ಅಕ್ರಮ ಗಣಿಗಾರಿಕೆ ಹೆಸರಲ್ಲಿ ಪ್ರಕೃತಿ ಮೇಲೆ ಬಲಾತ್ಕಾರ ಮಾಡಲಾಗುತ್ತಿದೆ ‘ ಎಂದರು.

‘ ಕುಮಾರ ಸ್ವಾಮಿ ದೇವಸ್ಥಾನ ದಕ್ಕೆಯಾಗಲು ಬಿಡಲ್ಲ. ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಣಿಗಾರಿಕೆ ಅವಕಾಶ ನೀಡಲ್ಲ. ಸಿಎಂ ಸಿದ್ದರಾಮಯ್ಯ ಹತ್ತಿರ ಮಾತನಾಡುವೆ. ಧಾರ್ಮಿಕ ಭಾವನೆ ಗೆ ದಕ್ಕೆಯಾಗಲು ಬಿಡಲ್ಲ ‘ ಎಂದಿದ್ದಾರೆ.

‘ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೇ ದೇವಸ್ಥಾನದ ಮೂರು ಕಿ.ಮಿ. ಸುತ್ತಮುತ್ತಲು ಗಣಿಗಾರಿಕೆ ‌ನಿಷೇಧಿಸುತ್ತೇನೆ. ಈ ಬಗ್ಗೆ ಸದ್ಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.