ಮಂಡ್ಯ : ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು

ಮಂಡ್ಯ : ಮಗನ ಸಾವಿನ ಸುದ್ದಿಯನ್ನು ಕೇಳಿ ಹೃದಯಾಘಾತದಿಂದ ತಾಯಿಯೂ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.
‌‌
ನಿತಿನ್ ರವರ ತಾಯಿ ಸರೋಜಮ್ಮ (47) ಮೃತಪಟ್ಟಿದ್ದಾರೆ. ನಿನ್ನೆ ಮಳವಳ್ಳಿ ತಾಲೂಕಿನ ಕಿರುಗಾವಲು ಬಳಿ ನಡೆದ ಅಪಘಾತದಲ್ಲಿ ನಿತಿನ್ ಸಾವನ್ನಪ್ಪಿದ್ದ. ನಿತಿನ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ತಾಯಿಗೆ ಹೃದಯಾಘಾತವಾಗಿ ಮಂಡ್ಯ ಆಸ್ವತ್ರೆಗೆ ಸೇರಿಸಲಾಗಿತ್ತು.

ಹೃದಾಯಾಘಾತದಿಂದಾಗಿ ಮಗನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೂಡ ತಾಯಿಗೆ ಆಗಿರಲಿಲ್ಲ. ಇಂದು ತಾಯಿ ಸರೋಜಮ್ಜ ಕೂಡ ಕೂಡ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Leave a Reply

Your email address will not be published.