ರಾಹುಲ್ ಜನಪ್ರಿಯತೆ BJP ಯವರಿಗೆ ಸಹಿಸಲು ಆಗುತ್ತಿಲ್ಲ : ಎಚ್.ಕೆ ಪಾಟೀಲ್

ರಾಹುಲ್ ಗಾಂಧಿ ಜೊತೆ ಬಾಗಲಕೋಟೆಯಲ್ಲಿ ಗದಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಸಚಿವ ಹೆಚ್ ಕೆ ಪಾಟಿಲ್ ಹೇಳಿಕೆ ನೀಡಿದ್ದಾರೆ. ‘ ರಾಹುಲ್ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜೊತೆ ಸಂತಸದಿಂದ ಚರ್ಚಿಸಿದ್ದಾರೆ. ಚುನಾವಣೆಯಲ್ಲಿ ಮಹಿಳೆಯರು ಮತ್ತು ಯುವಕರ ಸೆಳೆಯಲು ಸೂಚನೆ ನೀಡಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಸಮರ್ಥವಾಗಿ ಸಂಘಟಿಸಲು ಸೂಚಿಸಿದ್ದಾರೆ.

‘ ಚರ್ಚೆಯಲ್ಲಿ ಟಿಕೆಟ್ ಬಗ್ಗೆ ಯಾವುದೇ ವಿಚಾರ ಪ್ರಸ್ಥಾಪವಾಗಿಲ್ಲ. ಮಹಾದಾಯಿ ಬಗ್ಗೆ ಎಲ್ಲ ವಿಚಾರಗಳನ್ನು ತಿಳಿಸಿದ್ದೇವೆ. ಮುಂದೆ ಈ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಾರೆ ‘ ಎಂದರು.

ರಾಹುಲ್ ಭಾಷಣದಲ್ಲಿ ಬಸವಣ್ಣನವರ ವಚನ ಪ್ರಸ್ಥಾಪದ ಬಗ್ಗ ಮಾತನಾಡಿದ ಪಾಟೀಲ್ ‘ ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಬಸವಣ್ಣನವರ ವಚನದಲ್ಲಿ ನಂಬಿಕೆ ಮತ್ತು ಅವುಗಳ ಬಗ್ಗೆ ತಿಳಿದುಕೊಂಡವರು ಮಾತನಾಡುತ್ತಾರೆ.

ಅಮಿತ್ ಶಾ ರಾಜ್ಯ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿ ‘ ರಾಹುಲ್ ಗಾಂಧಿ ಜನಾಶಿರ್ವಾದ ಯಾತ್ರೆ ಯಶಸ್ವಿಯಾಗುತ್ತಿದೆ. ಹೋದಲ್ಲೆಲ್ಲ ಲಕ್ಷಾಂತರ ಜನ ಸೇರುತ್ತಿದ್ದಾರೆ. ಇದು ವಿರೋಧ ಪಕ್ಷ ಬಿಜೆಪಿಗೆ ಸಹಜವಾಗಿ ಸಹಿಸಲು ಆಗುತ್ತಿಲ್ಲ. ಆದ್ದರಿಂದ ಅಮಿತ್ ಶಾ ಮತ್ತು ಬಿಜೆಪಿಯವರು ಪ್ರವಾಸ ಮಾಡುತ್ತಿದ್ದಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com