ಹಾಸನ : ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ಬಿಜೆಪಿ ತಾ.ಪಂ ಸದಸ್ಯನ ಕೊಲೆ

ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತ ಕೊಲೆಯಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ದಬ್ಬೆ-ಚುಂಗನಹಳ್ಳಿ ಬಳಿ ನಡೆದಿದೆ. ತಡರಾತ್ರಿ ದೊಣ್ಣೆಯಿಂದ ಹೊಡೆದು ತಾಲ್ಲೂಕು ಪಂಚಾಯತ್ ಸದಸ್ಯನನ್ನು ಹತ್ಯೆ ಮಾಡಲಾಗಿದೆ.

ಬಿಜೆಪಿ ತಾ.ಪಂ.ಸದಸ್ಯ ನವಿಲಹಳ್ಳಿ ಕಿಟ್ಟಿ (35) ಕೊಲೆಯಾಗಿದ್ದಾರೆ. ವಿಕ್ರಮ್ ಕೌರಿ, ರಘು (ಅಪ್ಪಿ) ,ಶಶಿ, ಎಂಬುವವರು ಕೃತ್ಯ ಎಸಗಿರುವ ಆರೋಪವಿದೆ. ಈ ಮೂವರೂ ಬಿಜೆಪಿ ಕಾರ್ಯಕರ್ತರಿಂದಲೇ ತಾಲ್ಲೂಕು ಪಂಚಾಯತ್ ಸದಸ್ಯನ ಕೊಲೆಯಾಗಿದೆ ಎಂದು ಆರೋಪಿಸಿರುವ ಸ್ಥಳೀಯರು ಟೈರ್ ಗೆ ಬೆಂಕಿ ಹಚ್ಚಿ ಆರೋಪಿಗಳನ್ನ ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.

ಈ ಹಿಂದೆ ಮರಳು ದಂಧೆ ನಡೆಸುತ್ತಿದ್ದರು. ತಾಲ್ಲೂಕು ಪಂಚಾಯತ್ ಸದಸ್ಯ ಕಿಟ್ಟಿ ರಾತ್ರಿ ತಾನೂ ಮರಳು ತೆಗೆಯಲು ಹೊರಟಿದ್ದ. ನದಿ ಪಾತ್ರದಲ್ಲಿ ಮರಳು ತೆಗೆಯುವ ವೇಳೆ ಈ ನಾಲ್ವರ ನಡುವೆ ಘರ್ಷಣೆ ಕೊಲೆಯಲ್ಲಿ ಅಂತ್ಯವಾಗಿದೆ. ಮರಳು ದಂಧೆಕೋರರಿಗರ ಬೇಲೂರು ಪೊಲೀಸರ ಪರೋಕ್ಷ ಸಾಥ್ ಆರೋಪ ಕೇಳಿಬಂದಿದೆ.

ಸ್ಥಳೀಯರಿಂದ ಬೇಲೂರು ಪೊಲೀಸರ ವಿರುದ್ದವೇ ಆರೋಪ ಕೇಳಿ ಬಂದಿದ್ದು, ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com