ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದ ರಾಹುಲ್ ಗಾಂಧಿ

ಬೆಳಗಾವಿ : ಕಾಂಗ್ರೆಸ್ ಯುವರಾಜ ಸವದತ್ತಿಯ ಯಲ್ಲಮ್ಮ ದೇವಿಯ ದರ್ಶನ ಪಡೆದರು, ಯಲ್ಲಮ್ಮ ದೇವಸ್ಥಾನಕ್ಕೆ ರಾಹುಲ್ ಗಾಂಧೀ ಬರುವ ಎರಡು ತಾಸು ಮೊದಲು ಎಸ್ಪಿಜಿ ಸೆಕ್ಯುರಿಟಿ ದೇವಸ್ಥಾನವನ್ನು ಸುತ್ತುವರೆದು ಬಿಗಿ ಭದ್ರತೆ ನೀಡಿದರು‌. ರಾಹುಲ್ ಗಾಂಧೀ ಅವರು ದೇವಿಯ ದರ್ಶನ ಪಡೆಯುವ ಹಿನ್ನಲೆಯಲ್ಲಿ ಎರಡು ಘಂಟೆಗಳ ವರೆಗೆ ಭಕ್ತರಿಗೆ ದೇವಿಯ ದರ್ಶನ ತಡೆಯಲಾಗಿತ್ತು ಹೀಗಾಗಿ ಸಾವಿರಾರು ಜನ ಭಕ್ತರು ಮೊದಲು ರಾಹುಲ್ ದರ್ಶನ ಪಡೆದು ನಂತರ ದೇವಿಯ ದರ್ಶನ ಪಡೆಯಬೇಕಾಯಿತು.


ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯೆವಸ್ಥಾಪನಾ ಸಮೀತಿಯ ಅಧ್ಯಕ್ಷ ರಾಮನಗೌಡ ತಿಪರಾಶಿ ಆಡಳಿತಾಧಿಕಾರಿ ರವಿ ಕೋಟಾರಗಸ್ತಿ ಅವರು ರಾಹುಲ್ ಗಾಂಧೀ ಅವರಿಗೆ ಹೂಗುಚ್ಛ ನೀಡಿ ದೇವಸ್ಥಾನಕ್ಕೆ ಬರಮಾಡಿಕೊಂಡರು. ಪ್ರಧಾನ ಅರ್ಚಕ ಯಡಿಯೂರಪ್ಪ ಹಾಗು ಅರ್ಚಕ ಶಿವನಗೌಡ ಅವರು ದೇವಿಗೆ ವಿಶೇಷ ಪೂಜೆ ನೆರವೇರಿಸಿ ರಾಹುಲ್ ಗಾಂಧೀ ಅವರಿಗೆ ದೇವಿಯ ಪ್ರಸಾದ ನೀಡಲಾಯಿತು. ಮಂತ್ರಮುಗ್ಧರಾಗಿದ್ದ ರಾಹುಲ್ ಒಂದು ನಿಮಿಷ ದೇವಿಗೆ ಕೈ ಮುಗಿದು ದೇವಿಯ ದರ್ಶನ ಪಡೆದು ಪುನೀತರಾದರು.‌ಮುಖ್ಯಮಂತ್ರಿ ಸಿದ್ರಾಮಯ್ಯ ಡಾ ಜಿ ಪರಮೇಶ್ವರ,ಡಿಕೆ ಶಿವಕುಮಾರ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧೀ ಅವರ ಜೊತೆಗೆ ಯಲ್ಲಮ್ಮ ದೇವಿಯ ದರ್ಶನ ಪಡೆದರು.ಯಲ್ಗಮ ದೇವಸ್ಥಾನದ ಟ್ರಸ್ಟ ಕಮೀಟಿ ವತಿಯಿಂದ ರಾಹುಲ್ ಗಾಂಧೀ ಅವರಿಗೆ ಶಾಲು ಹೊದಿಸಿ ಸತ್ಕರಿಸಿ ಯಲ್ಲಮ್ಮ ದೇವಿಯ ಬೆಳ್ಳಿ ಮೂರ್ತಿಯನ್ನು ನೆಮಪಿನ ಕಾಣಿಕೆಯಾಗಿ ನೀಡಲಾಯಿತು

Leave a Reply

Your email address will not be published.