ಮೈಸೂರಿನ ಒಡೆಯರ್‌ ಸಂಸ್ಥಾನದ ಉತ್ತರಾಧಿಕಾರಿಗೆ ನಾಮಕರಣ…ಹೆಸರೇನು..?

ಬೆಂಗಳೂರು : ಅನೇಕ ವರ್ಷಗಳ ಬಳಿಕ ಮೈಸೂರು ಅರಮನೆಯಲ್ಲಿ ಮಗುವಿನ ಅಳು ಕೇಳಿಸಿದೆ. ಮೈಸೂರಿನ ರಾಜ ಯದುವೀರ್‌ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ಜನಿಸಿದ ಗಂಡು ಮಗುವಿಗೆ ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಾಮಕರಣ ಮಾಡಲಾಗಿದ್ದು, ಮಗುವಿಗೆ ಆದ್ಯವೀರ್‌ ನರಸಿಂಹರಾಜ ಒಡೆಯರ್‌ ಎಂದು ಹೆಸರಿಡಲಾಗಿದೆ.
ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ದಂಪತಿ ಶಾಸ್ತ್ರ ಸಂಪ್ರದಾಯದಂತೆ ನಾಮಕರಣ ಕಾರ್ಯ ನೆರವೇರಿಸಿದರು. ರಾಜ ಕುಟುಂಬ ಸೇರಿದಂತೆ ಕೆಲ ಆಪ್ತರನ್ನು ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com