ಯಡಿಯೂರಪ್ಪ ಜೈಲಿಗೆ ಹೋಗಿದ್ದು ಯಾಕೆ ? ಬೀಗತನ ಮಾಡೋಕಾ ? : CM ಸಿದ್ದರಾಮಯ್ಯ

ವಿಜಯಪುರ : ನಾನು ನಮ್ಮ ಸಾಧನೆಗಳನ್ನ ನಿಮ್ಮ ಮುಂದೆ ಬಿಚ್ಚಿಡಲು ಬಂದಿದ್ದೇನೆ. ನಮ್ಮ ಸಾಧನೆಗಳನ್ನ ನೋಡಿ ನಮಗೆ ಮತ ನೀಡಿ ಎಂದು ಸಿಎಂ ಸಿದ್ದಾಮಯ್ಯ ಮನವಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಮುಳವಾಡ ಗ್ರಾಮದಲ್ಲಿ ಮಾತನಾಡಿದ ಸಿಎಂ, ಬಿಜೆಪಿ ನಾಯಕರು ಅಭಿವೃದ್ಧಿ ಬಗ್ಗೆ ಮಾತ‌ನಾಡುವುದಿಲ್ಲ. ಕೇವಲ ಧರ್ಮದ ವಿಚಾರ ಪ್ರಸ್ತಾಪ ಮಾಡಿ, ಕೋಮುಗಲಭೆ ಹುಟ್ಟಿಸುತ್ತಾರೆ. ಅಮಿತ್ ಶಾ ಕೋಮುಗಲಭೆ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡ್ತಾರೆ. ಮೋದಿ ಬೆಂಗಳೂರಿಗೆ ಬಂದಾಗ ಮಾತನಾಡಲು ಯಾವುದೇ ವಿಷಯಗಳೆ ಇರಲಿಲ್ಲ. ಸಾಲ‌ಮನ್ನಾ ಮಾಡುವ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೋದಿ‌ ಮುಂದೆ ಬಾಯಿ‌ ಬಿಡಲ್ಲ. ನೀರಾವರಿಗೆ ಬಿಜೆಪಿ ಆಡಳಿತದ ಅವಧಿಯಲ್ಲಿ ಹಣ ನೀಡಲಿಲ್ಲ. ನಮ್ಮ ಸರ್ಕಾರ ನೀರಾವರಿಗೆ ಹೆಚ್ಚಿನ ಹಣ ನೀಡಿದ್ದೇವೆ. ಜನರು ಬಿಜೆಪಿ ನಾಯಕರ ಮಾತನ್ನ ನಂಬಬಾರದು ಎಂದಿದ್ದಾರೆ.

ಯಡಿಯೂರಪ್ಪ ಅವರಪ್ಪರಾಣೆ ಅಧಿಕಾರಕ್ಕೆ ಬರಲ್ಲ. ಕರ್ನಾಟಕದಲ್ಲಿ ಜೈಲಿಗೆ ಹೋಗಿ ಬಂದ ಏಕೈಕ ಮುಖ್ಯಮಂತ್ರಿ ಯಡಿಯೂರಪ್ಪ. ಯಡಿಯೂರಪ್ಪ ಒಬ್ಬ ಕಳಂಕಿತ ವ್ಯಕ್ತಿ. ಅಂತವರನ್ನ ಮುಖ್ಯಮಂತ್ರಿ ಮಾಡಬಾರದು. ಬಿಜೆಪಿ ಅವಧಿಯಲ್ಲಿ ಜೈಲಿಗೆ ಬಿಎಸ್ವವೈ ಯಾಕೆ ಹೋಗಿದ್ರು? ಜೈಲಲ್ಲಿ ಬೀಗತನ ಮಾಡೋಕೆ ಹೋಗಿದ್ರಾ? ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರು ನೀವು. ಚುನಾವಣೆ ಹತ್ತಿರವಾದಂತೆ ಬಿಜೆಪಿಯವರಿಗೆ ದಲಿತರು ನೆನಪಾಗಿದ್ದಾರೆ. ಇಷ್ಟು ದಿನ ಯಾಕೆ ಬಿಜೆಪಿಯವರಿಗೆ ದಲಿತರ ನೆನಪಾಗಲಿಲ್ಲವಾ? ದಲಿತರ ಬಗ್ಗೆ ಮೊಸಳೆ ಕಣ್ಣಿರು ಸುರಿಸುವುದು ಬಿಜೆಪಿ ನಾಯಕರು ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com