Shocking : ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿ ಹೃದಯಾಘಾತದಿಂದ ವಿಧಿವಶ

ಮುಂಬೈ : ದಶಕಗಳ ಕಾಲ ಸಿನಿ ರಸಿಕರನ್ನು ರಂಜಿಸಿದ್ದ ಬಾಲಿವುಡ್‌ ನ ಖ್ಯಾತ ನಟಿ ಶ್ಪೀದೇವಿ ಮೃತಪಟ್ಟಿದ್ದಾರೆ. ದುಬೈನಲ್ಲಿ ಶ್ರೀದೇವಿ ಅವರಿಗೆ ಹೃದಯಾಘಾತವಾಗಿ ಸಾವಿಗೀಡಾಗಿರುವುದಾಗಿ ಮೂಲಗಳು ತಿಳಿಸಿವೆ.
ಶ್ರೀದೇವಿಗೆ 54 ವರ್ಷವಾಗಿದ್ದು, ತಮ್ಮ ಸಂಬಂಧಿಕರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಪತಿ ಬೋನಿ ಕಪೂರ್‌ ಹಾಗೂ ಕಿರಿಯ ಪುತ್ರಿ ಖುಷಿ ಅವರ ಜೊತೆ ದುಬೈಗೆ ಹೋಗಿದ್ದರು. ಈ ವೇಳೆ ಶ್ರೀದೇವಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಶ್ರೀದೇವಿ ಅವರ ಭಾವ ಸಂಜಯ್‌ ಕಪೂರ್‌ ದೃಢಪಡಿಸಿದ್ದಾರೆ.
ಶ್ರೀದೇವಿಯವರ ಸಾವಿಗೆ ಇಡೀ ಸಿನಿಮಾ ರಂಗವೇ ಕಂಬನಿ ಮಿಡಿದಿದೆ. ಖ್ಯಾತ ನಟ-ನಟಿಯರು, ಅಬಿಮಾನಿಗಳು ನೆಚ್ಚಿನ ನಟಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲೇ ತಮಿಳಿನ ‘ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು

13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು.

ಇವರ ಕಲಾ ಸೇವೆಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಹ ಲಭಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com