ಹಿಂದುತ್ವ ಮತಬ್ಯಾಂಕ್ ವಿಭಜನೆಯಾಗಲು BJPಯೇ ಕಾರಣ : ಪ್ರಮೋದ್ ಮುತಾಲಿಕ್

ಉಡುಪಿ : ರಾಜ್ಯದಲ್ಲಿ ಶ್ರೀರಾಮಸೇನೆ ಶಿವಸೇನೆ ಜೊತೆ ಕೈ ಜೋಡಿಸಲಿದೆ. ಒಂಬತ್ತು ಮಂದಿಯ ಕಮಿಟಿ ರಚನೆ ಮಾಡಲಾಗಿದೆ. 52 ಕ್ಷೇತ್ರದಲ್ಲಿ ಶಿವಸೇನೆ ಸ್ಪರ್ಧೆ ಮಾಡುವುದಾಗಿ ನಿರ್ಧರಿಸಲಾಗಿದೆ. ನಾನು ಶೃಂಗೇರಿ ಅಥವಾ ತೇರದಾಳುವಿನಲ್ಲಿ ಸ್ಪರ್ಧಿಸಲಿದ್ದೇನೆ.

ಕಾರ್ಯಕರ್ತರಿಂದ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ. ಶಿವಸೇನೆಯಿಂದ ಕನ್ನಡಕ್ಕೆ ಯಾವುದೇ ರೀತಿಯ ಹೊಡೆತ ಬೀಳದು. ಕಳೆದ ಎರಡು ವರುಷಗಳಿಂದ ನಮಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವೆ.

ನಾವು ಬಿಜೆಪಿಗಿಂತ ಪ್ರಖರ ಹಿಂದುತ್ವವಾದಿಗಳು. ಬಿಜೆಪಿ ಡೋಂಗಿ ಹಿಂದುತ್ವ ಮಾಡುತ್ತಿದೆ. ಇಡೀ ಆಯುಷ್ಯ ಪೂರ್ತಿ ಕಾಂಗ್ರೆಸ್ ನಲ್ಲಿ ಕಳೆದ ಎಸ್.ಎಂ.ಕೃಷ್ಣ ಇವರಿಗೆ ಬೇಕಾಗುತ್ತೆ. ಆದ್ರೆ 40 ವರುಷಗಳ ಹಿಂದುತ್ವ ಹೋರಾಟಗಾರ ಮುತಾಲಿಕ್ ಬೇಡವಾಗುತ್ತಾರೆ. ಇವರಿಗೆ ಹಿಂದುತ್ವ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ?

ಉತ್ತರ ಕರ್ನಾಟಕದಲ್ಲಿ ಬಿಜೆಪಿ ಗೆಲುವಲ್ಲಿ ಕಾರ್ಯಕರ್ತರ ಶ್ರಮವೂ ಇದೆ. ಬಿಜೆಪಿಯ ಸೊಕ್ಕಿಗೆ ಶಿವಸೇನೆ ತಕ್ಕ ಉತ್ತರ ನೀಡಲಿದೆ. ಹಿಂದುತ್ವ ಮತಬ್ಯಾಂಕ್ ವಿಭಜನೆಯಾಗಲು ಬಿಜೆಪಿಯೇ ಕಾರಣ. ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಾಗಿಲು ಮುಚ್ಚಿಹೋಗಿದೆ, ನಾವು ಸಾಕಷ್ಟು ಮುಂದೆ ಹೋಗಿದ್ದೇವೆ.

ಕಾಂಗ್ರೆಸ್, ಬಿಜೆಪಿ ಹಿಂದುತ್ವವನ್ನು ಸವಾರಿ ಮಾಡಿ ಅಧಿಕಾರ ತೆಗೆದುಕೊಳ್ಳುವ ಗುರಿ ಹೊಂದಿದೆ. ಐದು ವರುಷ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಹತ್ಯೆ ನಿಷೇಧ ಮಾಡಿಲ್ಲ. ಇವರದ್ದು ಯಾವ ರೀತಿಯ ಹಿಂದುತ್ವ? ನನ್ನ ಮೇಲೆಯೇ 7 ಕೇಸು ಹಾಕಿ ಜೈಲಿಗೆ ತಳ್ಳಲಾಗಿತ್ತು. ಹಿಂದೂ ಕಾರ್ಯಕರ್ತರು ಸತ್ತಾಗ ಕಣ್ಣೀರು ಸುರಿಸುತ್ತಾರೆ.

ಕೋರ್ಟ್ ಗೆ ಅಲೆದಾಡುವ ಕಾರ್ಯಕರ್ತರ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಕಾಂಗ್ರೆಸ್ ನ ಮುಸ್ಲಿಮರ ತುಷ್ಟೀಕರಣದಿಂದ ಭಯೋತ್ಪಾದನೆ ಹುಟ್ಟಿಕೊಂಡಿತ್ತು. ಈಗ ಹಿಂದೂಗಳ ನೆನಪಾಗಿದೆ. ಕೇಂದ್ರದಲ್ಲಿ ಧೂಳೀಪಟವಾದ ಮೇಲೆ ಎಚ್ಚೆತ್ತುಕೊಂಡಿದ್ದಾರೆ.

‘ ದರ್ಗಾ, ಮಸೀದಿಗೆ ಹೋದ್ರೆ ಮಾತ್ರ ಸಾಲದು. ದೇವಾಲಯಗಳು ಬೇಕು ಎನ್ನುವುದನ್ನು ಕಾಂಗ್ರೆಸ್ ನವರಿಗೆ ಗೊತ್ತಾಗಿದೆ. ಇದು ನಾಟಕವೇ ಹೊರತು, ನಿಜವಲ್ಲ ‘ ಎಂದು ಉಡುಪಿಯಲ್ಲಿ ಶ್ರೀರಾಮಸೇನೆ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com