ಮೋದಿಯಂತಹ ದೊಡ್ಡ ಸುಳ್ಳುಗಾರ ಮತ್ತೊಬ್ಬರಿಲ್ಲ : ಸಿದ್ದರಾಮಯ್ಯ

ಬಾಗಲಕೋಟೆ ಜಿಲ್ಲೆಯ ಚಿಕ್ಕಪಡಸಲಗಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ‘ ಜೈಲಿಗೆ ಹೋದವರನ್ನ ಪಕ್ಕದಲ್ಲಿ ಕೂರಿಸಿಕೊಳ್ಳೋ ನರೇಂದ್ರ ಮೋದಿಗೆ ಮಾನ ಮಯಾ೯ದೆ ಇದೆಯಾ..? ‘ ಎಂದು ಕೇಳಿದ್ದಾರೆ.

‘ ಹಗರಣ ಇಲ್ಲದ ಸ್ವಚ್ಚಸಕಾ೯ರ ನಮ್ಮ ಸಕಾ೯ರ. ಲೂಟಿ ಹೊಡೆದವರನ್ನ ನಂಬಬೇಡಿ. ಜನರ ಆಶೀವಾ೯ದ ಬಯಸಿ ಮತ್ತೇ ಜನರ ಮುಂದೆ ಬಂದಿದ್ದೇವೆ. ಬಸವಣ್ಣನವರ ತತ್ವ ನುಡಿದಂತೆ ನಡೆಯಬೇಕು. ಮೋದಿ ಎಂದೂ ನುಡಿದಂತೆ ನಡೆದಿಲ್ಲ. ಸಬ್ ಕಾ ಸಾಥ್, ಸಬ್ ವಿಕಾಸ್ ಎಂದವರಿಗೆ ಜನರು ಕಾಣುತ್ತಿಲ್ಲ. ಮೋದಿ ಅಂತ ಸುಳ್ಳುಗಾರ ಮತ್ತೊಬ್ಬರಿಲ್ಲ. ಬಿಜೆಪಿಯವರಿಗೆ ಸುಳ್ಳೆ ಸತ್ಯವಾಗಿದೆ ‘ ಎಂದಿದ್ದಾರೆ.

‘ ಯಡಿಯೂರಪ್ಪ ಗೆ ಸಾಲಮನ್ನಾ ಬಗ್ಗೆ ಕೇಳಿದ್ರೆ ಸ್ಪಂದಿಸಿರಲಿಲ್ಲ. ಯಡಿಯೂರಪ್ಪ, ಜಗದೀಶ ಶೆಟ್ಟರ್, ಈಶ್ವರಪ್ಪನವರಿಗೆ ರೈತರ ಬಗ್ಗೆ ಮಾತನಾಡೋ ಹಕ್ಕಿಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com