ಆಸ್ತಿಗಾಗಿ ಹೆತ್ತ ತಾಯಿ ಹಾಗೂ ತಂಗಿಯನ್ನು ಅದೆಂಥಾ ಪರಿಸ್ಥಿತಿಗೆ ತಳ್ಳಿದ್ರು ಪಾಪಿಗಳು..!

ಮಂಡ್ಯ : ವಾಸ್ತವ ಪರಿಸ್ಥಿತಿಯಲ್ಲಿ ಆಸ್ತಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಹಣವೊಂದಿದ್ದರೆ ಸಾಕು ಮತ್ತೇನೂ ಬೇಡ ಎಂಬ ಸ್ಥಿತಿಗೆ ತಲುಪಿದ್ದಾರೆ ಜನ. ಅದೇ ರೀತಿ ಮಂಡ್ಯದಲ್ಲಿ  ಸ್ತಿಗಾಗಿ ವೃದ್ಧ ತಾಯಿ ಮತ್ತು ತಂಗಿಯನ್ನು ಪಾಪಿಗಳು ಕೂಡಿ ಹಾಕಿದ ಘಟನೆ ನಡೆದಿದೆ.

ಬಂಧಿತ ತಾಯಿಯನ್ನು ಸುನಂದಮ್ಮ ಹಾಗೂ ತಂಗಿ ರಮ್ಯಾ ಎಂದು ಹೆಸರಿಸಲಾಗಿದೆ. ಸುನಂದಮ್ಮ ಹಿರಿಯ ಮಗಳು ಗೀತಾ ಮತ್ತು ಅಳಿಯ ನಾಗರಾಜು ಈ ಕೃತ್ಯ ಎಸಗಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ತಾಯಿ ತಂಗಿಯನ್ನು ಗೃಹ ಬಂಧನದಲ್ಲಿರಿಸಿದ್ದು, ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.  ಇಂದು ಬೆಳಗ್ಗೆ ಮನೆಯೊಳಗಿನಿಂದ ವೃದ್ಧ ತಾಯಿ ಜೋರಾಗಿ ಕೂಗಿಕೊಳ್ಳುತ್ತಿದ್ದು, ವೃದ್ದ ತಾಯಿಯ ರೋಧನ ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವೃದ್ದ ತಾಯಿ ಹಾಗೂ ತಂಗಿಯನ್ನು ಬಂಧಮುಕ್ತ ಮಾಡಿದ್ದು,ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.