ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯದ ಜನರ ಹಾದಿ ತಪ್ಪಿಸುತ್ತಿವೆ : ಕುಮಾರಸ್ವಾಮಿ

ಬಳ್ಳಾರಿ : ಸಂಡೂರಿನಲ್ಲಿ ಮಾಜಿ ಸಿಎಂ ಕುಮಾರ ಸ್ವಾಮಿ ಹೇಳಿಕೆ ನೀಡಿದ್ದಾರೆ.  ಸಮಾವೇಶ ಮುಗಿದ ನಂತರ ಸಂಡೂರಿನಲ್ಲಿ ಮಾತನಾಡಿದ ಎಚ್ ಡಿಕೆ ‘ ೨೦೧೮ ರ ಚುನಾವಣ ಪರ್ವ ಪ್ರಾರಂಭವಾಗಿದೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕ ರಾಗ ಪ್ರಾವಸ, ಹೈಕ ಭಾಗದಲ್ಲಿ ಅಮಿತ್ ಷಾ ಪ್ರವಾಸ ಮಾಡುತ್ತಿದ್ದಾರೆ. ಈ ಎರಡು ರಾಷ್ಟ್ರೀಯ ಪಕ್ಷಗಳು ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ,

ಇನ್ನೂ ಪ್ರಾದೇಶಿಕ ಪಕ್ಷ ಜೆಡಿಎಸ್ ಪ್ರವಾಸ ಕೈಗೊಳ್ಳಲಾಗಿದೆ, ಜೆಡಿಎಸ್ ನಿಲುವು ಏನು ಅಂತಾ ಜೆಡಿಎಸ್ ಜನರ ಬಳಿ ಹೋಗುತ್ತಿದೆ. ಸತತವಾಗಿ ೨೨ ಕ್ಷೇತ್ರದಲ್ಲಿ ಪ್ರಚಾರ ಮಾಡಲಾಗಿದೆ, ಇನ್ನೂ ೪೪ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಮೊದಲ ಹಂತದ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದು, ಎರಡನೇಯ ಪಟ್ಟಿ ಸಧ್ಯದಲ್ಲೆ ಬಿಡುಗಡೆ ಮಾಡುತ್ತೇವೆ.

ಹೈಕ ಭಾಗದ ರಾಯಚೂರಿನಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದ್ದೆವೆ. ವಿಜಯಪುರದಲ್ಲಿ ರೈತ ಸಮಾವೇಶ ಮಾಡಲಿದ್ದೇವೆ. ಬಳ್ಳಾರಿಯ ಜಿಂದಾಲ್ ಕಂಪನಿ ಕೆಲವರಿಗೆ ಮಾತ್ರ ಉಪಯೋಗ ಆಗಿದೆ, ಬಡವರು ಇದರಿಂದ ದೂರ ಉಳಿದಿದ್ದಾರೆ. ಈ ಕಂಪನಿಯಿಂದ ಬಡವರು ದೂರ ಉಳಿದಿದ್ದಾರೆ. ಬಳ್ಳಾರಿಯಲ್ಲಿ ನಮ್ಮ ಪಕ್ಷ ಕವಲು ದಾರಿಯಲ್ಲಿತ್ತು, ಪಕ್ಷದ ವೃದ್ಧಗೆ ಆಧ್ಯತೆ ನೀಡುತ್ತೇವೆ

ಜೆಡಿಎಸ್ ನ ಪ್ರಚಾರ ಬಳ್ಳಾರಿಯಲ್ಲಿ ಜೋರಾಗಿದೆ, ಇಲ್ಲಿ ೪ ರಿಂದ ೫ ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸುತ್ತೇವೆ. ಗಣಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಓತೂರು ಪಕ್ಷ ಸೇರುತ್ತಿದ್ದಾರೆ. ಇವರು ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿ ಯಾಗಿದ್ದರೆ. ಮುಂದಿನ ದಿನಗಳಲ್ಲಿ ಬಳ್ಳಾರಿಯ ಒಂಭತ್ತು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com