ನಟಿ ಶ್ರೀದೇವಿ ಸಾವಿಗೆ ಕಾಂಗ್ರೆಸ್‌ ಟ್ವೀಟ್‌ : ಮತ್ತೆ ಯಡವಟ್ಟು ಮಾಡಿಕೊಂಡ ಕೈ ಪಡೆ ?

ದೆಹಲಿ : ಬಾಲಿವುಡ್‌ ನಟಿ ಶ್ರೀದೇವಿ ಅವರ ಸಾವಿಗೆ ಎಲ್ಲೆಡೆಯಿಂದ ಸಂತಾಪಗಳು ಕೇಳಿಬರುತ್ತಿವೆ. ಈ ಮಧ್ಯೆ ಕಾಂಗ್ರೆಸ್‌ ಟ್ವೀಟ್‌ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದೆ.
ಶ್ರೀದೇವಿಯವರ ನಿಧನಕ್ಕೆ ಸಂತಾಪ ಸೂಚಿಸಿರುವ ಕಾಂಗ್ರೆಸ್‌ 2013ರಲ್ಲಿ ಯುಪಿಎ ಸರ್ಕಾರ ಶ್ರೀದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾಗಿ ಹೇಳಿಕೊಂಡಿದೆ.
ಶ್ರೀದೇವಿ ಅವರ ನಿಧನದ ಸುದ್ದಿ ಕೇಳಲು ವಿಷಾದಿಸುತ್ತೇವೆ. ಶ್ರೀದೇವಿ ಅವರ ಸಾವಿನಿಂದ ಸಿನಿಮಾ ರಂಗ ಬರಡಾಗಿದೆ. ಯುಪಿಎ ಸರ್ಕಾರ 2013ರಲ್ಲಿ  ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತ್ತು ಎಂದು ಟ್ವೀಟ್‌ ಮಾಡಿದ್ದು., ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಆ ಟ್ವೀಟನ್ನು ತೆಗೆದು ಹಾಕಿದೆ.
ಇನ್ನು ಕಾಂಗ್ರೆಸ್‌ ನಡೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com