ಬಾಲನಟಿಯಿಂದ ಸೂಪರ್ ಸ್ಟಾರ್ ಆಗಿ ಮೆರೆದ ಶ್ರೀದೇವಿ ಬದುಕಿನತ್ತ ಒಂದು ನೋಟ..

ಹಲವಾರು ಭಾಷೆಗಳಲ್ಲಿ ಸೂಪರ್ ಸ್ಟಾರ್ ನಾಯಕಿಯಾಗಿ ಮೆರೆದ ಶ್ರೀದೇವಿ ಭಾನುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 54 ವರ್ಷದವರಾಗಿದ್ದ ಶ್ರೀದೇವಿ, ತಮ್ಮ ಪತಿ ಬೋನಿ ಕಪೂರ್, ಮಕ್ಕಳಾದ ಜಾಹ್ನವಿ, ಖುಶಿಯನ್ನು ಅಗಲಿದ್ದಾರೆ.

ಶ್ರೀದೇವಿ 1963 ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಸಿಯಲ್ಲಿ ಜನಿಸಿದರು. ಕೇವಲ ನಾಲ್ಕು ವರ್ಷ ವಯಸ್ಸಿನವರಿದ್ದಾಗ ಶ್ರೀದೇವಿ ತುನೈವನ್ ಎಂಬ ತಮಿಳು ಚಿತ್ರದ ಮೂಲಕ ಬಾಲ ನಟಿಯಾಗಿ ಚಿತ್ರಂಗವನ್ನು ಪ್ರವೇಶಿಸಿದರು.

Image result for sridevi child actress

ಬಳೀಕ 1971 ರಲ್ಲಿ ‘ ಪೂಂಪಟ್ಟಾ ‘ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿ ಕೇರಳ ರಾಜ್ಯದ ಅತ್ಯುತ್ತಮ ಬಾಲ ನಟಿ ಪ್ರಶಸ್ತಿಯನ್ನು ಪಡೆದರು. ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯ ಲಲಿತಾ ಅವರೊಂದಿಗೆ 3 ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.

Image result for sridevi child actress

1975 ರಲ್ಲಿ ತೆರೆಕಂಡ ‘ ಜೂಲಿ ‘ ಹಿಂದಿ ಚಿತ್ರದಲ್ಲಿ ನಾಯಕಿಯ ಸೋದರಿಯ ಪಾತ್ರದಲ್ಲಿ ಅಭಿನಯಿಸಿ ಬಾಲಿವುಡ್ ರಂಗಕ್ಕೆ ಪ್ರವೇಶ ಪಡೆದರು. 1976 ರಲ್ಲಿ ‘ಮೂಂದ್ರು ಮೂದಿಚು’ ಸಿನೆಮಾದಲ್ಲಿ ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರೊಂದಿಗೆ, ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದರು.

Image result for sridevi rajinikanth

ರಜನೀಕಾಂತ್ ಅವರ ಜೊತೆಗಿನ ‘ಚಾಲ್ ಬಾಜ್’ ಹಾಗೂ ಕಮಲ್ ಹಾಸನ್ ಅವರೊಂದಿಗಿನ ‘ಸದ್ಮಾ’ ಸಿನೆಮಾಗಳು ಶ್ರೀದೇವಿಗೆ ಅಪಾರ ಜನಪ್ರಿಯತೆಯನ್ನು ಗಳಿಸಿಕೊಟ್ಟವು.

1883 ರಲ್ಲಿ ಬಿಡುಗಡೆಯಾದ ಹಿಂದಿಯ ‘ ಹಿಮ್ಮತ್ ವಾಲಾ’ ಚಿತ್ರ ಶ್ರೀದೇವಿಗೆ ಬಾಲಿವುಡ್ ನಲ್ಲಿ ದೊಡ್ಡ ಬ್ರೇಕ್ ನೀಡಿತು. ಅಂದಿನ ಜನಪ್ರಿಯ ನಾಯಕ ಜೀತೆಂದ್ರ ಹಾಗೂ ಶ್ರೀದೇವಿ ಜೊತೆಯಾಗಿ ಕಾಣಿಸಿಕೊಂಡ ‘ ನೈನೋ ಸಪನಾ, ಸಪನೋ ಮೆ ಸಜನಾ ‘ ಹಾಡು ಸೂಪರ್ ಹಿಟ್ ಆಯಿತು.

Image result for himmatwala old

ಮಿಸ್ಟರ್ ಇಂಡಿಯಾ, ನಾಗಿನಾ ಚಾಂದಿನಿ, ಲಮ್ಹೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆಲ ವರ್ಷಗಳ ಹಿಂದೆ ತೆರೆಕಂಡ ಶ್ರೀದೇವಿಯವರ ಕಮ್ ಬ್ಯಾಕ್  ಮೂವಿ ‘ ಇಂಗ್ಲೀಷ್ ವಿಂಗ್ಲೀಷ್ ‘ ಸಿನೆಮಾ ಚಿತ್ರ ರಸಿಕರ ಮನ ಗೆದ್ದಿತ್ತು. ಶ್ರೀದೇವಿ ಪದ್ಮಶ್ರೀ ಹಾಗೂ ಹಲವಾರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.

Image result for english vinglish

ಇನ್ನೂ ಬಿಡುಗಡೆಯಾಗಬೇಕಿರುವ ಶಾರುಖ್ ಖಾನ್ ಅಭಿನಯದ ‘ಜೀರೋ’ ಚಿತ್ರದಲ್ಲಿ ಶ್ರೀದೇವಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com