BJP, ಕಾಂಗ್ರೆಸ್‌ಗೆ ಅವಕಾಶ ಕೊಟ್ಟಿದ್ದೀರಿ, ನನಗೂ ಒಂದು ಅವಕಾಶ ಕೊಡಿ : HDK ಮನವಿ

ಬಳ್ಳಾರಿ : ಮಾಜಿ ಸಿಎಂ ಎಚ್‌. ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ವಿಕಾಸ ಪರ್ವ ಯಾತ್ರೆ ಬಳ್ಳಾರಿಗೆ ತಲುಪಿದ್ದು, ಈ ವೇಳೆ ಎಚ್‌ಡಿಕೆ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಬಳ್ಳಾರಿ ಜನ ಶ್ರಮಜೀವಿಗಳು, ಮುಗ್ದರು, ಬಡತನ ಕೂಡ ಇದೆ, ಇದನ್ನು ರಾಜಕಾರಣಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ನೋವಿನ ಸಂಗತಿ. ಇಲ್ಲಿ ಮಳೆಯೂ ಬರೋಲ್ಲ, ಬೆಳೆ ಬೆಳೆದರೂ ಬೆಂಬಲ ಬೆಲೆಯೂ ಸಿಗೋಲ್ಲ. ವಿಜಯನಗರ ವೈಭವ ಹಿನ್ನಲೆ ಹೊಂದಿದ ಜಿಲ್ಲೆ ಅದು ಬಳ್ಳಾರಿ. ಚಿನ್ನದ ಬೆಲೆ ಇರುವ ಮಣ್ಣಿನ ಲಾಭ ನಿಮಗೆ ಸಿಗಲಿಲ್ಲ, ಇಲ್ಲಿ ಯಾರು ಮಣ್ಣು ಹೊಡೆದ್ರೋ, ಯಾರೋ ಅದಿರಿ ಹೊಡೆದ್ರೋ ನಮಗೆ ಗೊತ್ತಿಲ್ಲ. ಇದರಿಂದ ಯಾರೋ ನಾಲ್ಕು ಜನ ಲಾಭ ಪಡೆದರು. ಈ ಬಗ್ಗೆ ನಾನು ಹೆಚ್ಚು ಮಾತಾಡೋಲ್ಲ ಎಂದಿದ್ದಾರೆ.

ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತಿಲ್ಲ, ಕೆರೆ ಕಟ್ಟೆಗಳಿಗೆ ನೀರು ತುಂಬಿಸಿದರೆ ಅರ್ಧ ಕಷ್ಟ ತೀರುತ್ತದೆ. ಆದರೆ ಆಡಳಿತ ಪಕ್ಷಗಳಿಗೆ ಇದರ ಬಗ್ಗೆ ಕಾಳಜಿ ಇಲ್ಲ. ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡ್ತಿದ್ದಾರೆ. ಕುಮಾರ ಸ್ವಾಮಿಗೆ ಅಧಿಕಾರ ನೀಡಬೇಕು ಎಂಬ ಹಂಬಲ ನಿಮ್ಮದಾಗಿದೆ, ಆ ಕಾರಣಕ್ಕೆ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಈ ಸಲ ನನಗೆ ಅವಕಾಶ ಕೊಟ್ಟು ಕಾದು ನೋಡಿ, ನಾನು ಆಕಸ್ಮಿಕ ವಾಗಿ ಈ ಹಿಂದೆ ಸಿಎಂ ಆಗಿದ್ದೆ. 20 ತಿಂಗಳ ಆಡಳಿತ ಉತ್ತಮವಾಗಿತ್ತು.  2008ರಲ್ಲಿ ಬಿಜೆಪಿ ಗೆಲ್ಲಿಸಿದ್ದಿರಿ, ಕಾಂಗ್ರೆಸ್ ಗೂ ಅವಕಾಶ ನೀಡಿದ್ದಿರಿ. ಈ ಸಲ ನನಗೆ ಅವಕಾಶ ನೀಡಿ, ಮತ ಹಾಕಲು ಹೋದಾಗ ನನ್ನ ಮರಿಬೇಡಿ, ನಾನು ಸಿಎಂ ಆಗಿದ್ದಾಗ ಹೊಸ ಬದಲಾವಣೆ ತಂದೆ. ರೈತರ ಸಾಲ ಮನ್ನಾ ಮಾಡಿ ಅಂತ ಯಾರು ಹೇಳಿಲ್ಲ, ಆದರೂ ಅಂದು ಸಾಲ ಮನ್ನಾ ಮಾಡಿದ್ದೇನೆ.  50 ಸಾವಿರ ಸಾಲ ಮನ್ನಾ ಅಂತ ಘೋಷಿಸಲು ನಿರ್ಧಾರ ಮಾಡಿದೆ, ಅದ್ರೇ ಬಿಎಸ್ವೈ ಎಲ್ಲಿದೆ ದುಡ್ಡು ಅಂದರು. ನಾನು ಘೋಷಣೆ ಮಾಡಿದ 20 ದಿನದಲ್ಲಿ ಮನ್ನಾ ಮಾಡಿದೆ ಎಂದಿದ್ದಾರೆ.

 

ನಾನು ಅಧಿಕಾರ ಕೇಳಲು ಬಂದಿದ್ದೇನೆ. ನನಗೆ ಅಧಿಕಾರ ನೀಡಿದರೆ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ. ನನಗೆ ನೀವು ಅಧಿಕಾರ ನೀಡಿದರೆ 24 ತಾಸಿನಲ್ಲಿ ರೈತರ ಸಾಲ ಮನ್ನಾ ಮಾಡ್ತಿನಿ. ಯಾವ ಷರತ್ತು ಹಾಕೋಲ್ಲ, ನೀವು ಸಾಲಗಾರರಾಗಬಾರದು. ನಾನು ಇಸ್ರೇಲ್ ನಲ್ಲಿ ಸಾಯಬೇಕಾಗಿತ್ತು. ನಾನು ಎಷ್ಟು ದಿನ ಬದುಕಿರುತ್ತೇನೆ ಅನ್ನೋದು ಮುಖ್ಯವಲ್ಲರೈತರಿಗಾಗಿ ನಾನು ಏನೂ ಮಾಡುತ್ತೇನೆ ಅನ್ನೋದು ಮುಖ್ಯ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com