ಕಾನೂನು ಜಾರಿಯಾಗೋವರೆಗೂ ಹಿಂದೂಗಳು ಮಕ್ಕಳನ್ನು ಹಡೆಯುತ್ತಿರಬೇಕು : BJP ನಾಯಕ

ಲಖನೌ : ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಕಾನೂನು ರೂಪಿಸುವವರೆಗೂ ನೀನು ಮಕ್ಕಳನ್ನು ಹಡೆಯುತ್ತಿರು. ಆ ಪ್ರಕ್ರಿಯೆಯನ್ನು ನಿಲ್ಲಿಸಬೇಡ ಎಂದು ನನ್ನ ಪತ್ನಿಗೆ ಹೇಳಿದ್ದೇನೆ ಎಂದು ಬಿಜೆಪಿ ಶಾಸಕ ವಿಕ್ರಂ ಸೈನಿ ಹೇಳಿದ್ದು, ವಿವಾದ ಸೃಷ್ಠಿಯಾಗಿದೆ.

ಮುಜಪ್ಫರ್‌ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು. ನನ್ನ ಪತ್ನಿ ನಮಗಿಬ್ಬರು ಮಕ್ಕಳು ಸಾಕು ಎನ್ನುತ್ತಾಳೆ. ಆದರೆ ಜನಸಂಖ್ಯಾ ನಿಯಂತ್ರಣ ಕಾನೂನು ಅಸ್ತಿತ್ವಕ್ಕೆ ಬರುವವರೆಗೂ ಮಕ್ಕಳನ್ನು ಹಡೆಯುವಂತೆ ಹೇಳಿದ್ದೇನೆ. ನಾವೇನೋ ನಾವಿಬ್ಬರು ನಮಗಿಬ್ಬರು ತತ್ವ ಅನುಸರಿಸಲು ಒಪ್ಪಿದ್ದೇವೆ. ಆದರೆ ಬೇರೆಯವರಿಗೆ ಅದು ಅರ್ಥವಾಗುತ್ತಿಲ್ಲ. ಕಾನೂನು ಎಲ್ಲರಿಗೂ ಒಂದೇ. ಹಿಂದೂಗಳು ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಬಾರದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com