ದೇಶಕ್ಕಾಗಿ ಸರ್ವಸ್ವವನ್ನು ಕೊಟ್ಟ ಕುಟುಂಬದಿಂದ ಬಂದವರು ರಾಹುಲ್ ಗಾಂಧಿ : ರಮಾನಾಥ ರೈ

ಉಡುಪಿ : ಕಾಂಗ್ರೆಸ್ ಗೂಂಡಾಗಿರಿ, ದರ್ಪದ ಬಗ್ಗೆಯೂ ರಾಹುಲ್ ಮಾತಾಡಲಿ ಎಂದು ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಸಚಿವ ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಲ್ಲಿ ಯಾರೋ ಒಬ್ಬ ತಪ್ಪು ಮಾಡಿದ್ದಾರೆ, ಅವರಿಗೆ ತಕ್ಕ ಶಾಸ್ತಿಯಾಗಿದೆ. ಹಾಗೆ ನೋಡುವುದಾದರೆ ಬಾಳಿಗಾ ಕೊಂದ ನರೇಶ್ ಶೆಣೈ ಗೆ ಬಿಜೆಪಿ ವಿಐಪಿ ಪಾಸ್ ನೀಡುತ್ತೆ. ನರೇಂದ್ರ ಮೋದಿ ಜೊತೆ ಶೆಣೈ ತಿರುಗಾಡುತ್ತಾರೆ. ಮೊದಲು ಬಿಜೆಪಿಗರು ಏನು ಎನ್ನುವುದು ತಿಳಿದುಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ.

ದೇಶಕ್ಕಾಗಿ ಸರ್ವಸ್ವವನ್ನು ಕೊಟ್ಟ ಕುಟುಂಬದಿಂದ ಬಂದವರು ರಾಹುಲ್ ಗಾಂಧಿ. ಸ್ವಾತಂತ್ರ್ಯ ಹೋರಾಟ ಬಿಜೆಪಿ ದೃಷ್ಟಿಯಲ್ಲಿ ಸಣ್ಣದಿರಬಹುದು. ಬಿಜೆಪಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಇರುವವರು. ಯಾಕೆಂದರೆ ಬಿಜೆಪಿಗರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದವರು. ನೆಹರೂ ಕುಟುಂಬದ ರಕ್ತ ರಾಹುಲ್ ಗಾಂಧಿ. ರಾಹುಲ್ ಗಾಂಧಿಗೂ, ಬೇರೆಯವರಿಗೂ ಹೋಲಿಕೆ ಇಲ್ಲ. ಪಾರಂಪರಿಕ ಇತಿಹಾಸ ಇರುವುದು ಯಾರಿಗೆ ಅನ್ನೋದು ಜನರು ತಿಳಿದುಕೊಳ್ಳಬೇಕು ಎಂದಿದ್ದಾರೆ.

Leave a Reply

Your email address will not be published.