ಶಾಲೆಗೆ ನುಗ್ಗಿದ ಬಸ್‌ : ಸ್ಥಳದಲ್ಲೇ ಒಂಬತ್ತು ಮಕ್ಕಳ ದಾರುಣ ಸಾವು

ಪಾಟ್ನಾ : ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಸರ್ಕಾರಿ ಶಾಲೆಗೆ ನುಗ್ಗಿದ ಪರಿಣಾಮ 9 ಮಕ್ಕಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬಿಹಾರದ ಮೀನಾಪುರ ಜಿಲ್ಲೆಯ ಧರ್ಮಪುರ ಗ್ರಾಮದಲ್ಲಿ ನಡೆದಿದೆ.


ಘಟನೆಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಮಕ್ಕಳ ಪೈಕಿ ನಾಲ್ವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿರುವುದಾಗಿ ಹೇಳಲಾಗಿದೆ.
ಬಸ್‌ ಚಾಲಕ ಕಂಠಪೂರ್ತಿ ಕುಡಿದು ಬಸ್‌ ಚಲಾಯಿಸುವ ವೇಳೆ ನಿಯಂತ್ರಣ ತಪ್ಪಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಧರ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಕ್ಕಳ ಕುಟುಂಬಕ್ಕೆ ಬಿಹಾರ ಸರ್ಕಾರ ತಲಾ 4 ಲಕ್ಷ ರೂ ಪರಿಹಾರ ಘೋಷಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com