ಮದುವೆಗೆ ಬಂದಿದ್ದ Gift ತೆಗೆಯುತ್ತಿದ್ದಂತೇ ಇಹಲೋಕ ತ್ಯಜಿಸಿದ ವರ…..ಆದದ್ದೇನು ?

ಭುವನೇಶ್ವರ್‌ : ಮದುವೆಗೆ ಬಂದ ಗಿಫ್ಟ್ ನೋಡುತ್ತಿದ್ದ ವೇಳೆ ಗಿಫ್ಟ್‌ನಲ್ಲಿಟ್ಟಿದ್ದ ಬಾಂಬ್‌ ಸ್ಪೋಟಗೊಂಡು ಸ್ಥಳದಲ್ಲೇ ಮೂವರು ಸಾವಿಗೀಡಾದ ಘಟನೆ ಒಡಿಶಾದ ಬೊಲ್ಗೀರ್‌ನಲ್ಲಿ ನಡೆದಿದೆ.

ಮದುವೆಯಾಗಿ ಐದು ದಿನಗಳ ಬಳಿಕ ಎಲ್ಲಾ ಕಾರ್ಯಕ್ರಮವನ್ನು ಮುಗಿಸಿ, ಮನೆಯವರೆಲ್ಲ ಒಂದೆಡೆ ಕುಳಿತು ಮದುವೆಗೆ ಬಂದಿದ್ದ ಗಿಫ್ಟ್‌ಗಳನ್ನು ನೋಡುತ್ತಿದ್ದರು. ಈ ವೇಳೆ ವರ ಗಿಫ್ಟೊಂದನ್ನು ತೆರೆದಿದ್ದಾನೆ. ಆಗ ಇದ್ದಕ್ಕಿದ್ದಂತೆ ಬಾಂಬ್ ಬ್ಲಾಸ್ಟ್ ಆಗಿದ್ದು, ಮೂವರು ಸಾವಿಗೀಡಾಗಿದ್ದಾರೆ. ವಧುವಿಗೆ ಗಂಭೀರ ಗಾಯಗಳಾಗಿದ್ದು ಚಿಂತಾಜನಕ ಸ್ಥಿತಿಯಲ್ಲರುವುದಾಗಿ ತಿಳಿದುಬಂದಿದೆ.

ಮದುವೆಯ ಆರತಕ್ಷತೆಯ ದಿನ ಅಪರಿಚಿತ ವ್ಯಕ್ತಿಯೊಬ್ಬ ಬಂದು ವರನಿಗೆ ಗಿಫ್ಟ್‌ ನೀಡಿ ಹೋಗಿದ್ದನು. ಅದರಲ್ಲಿ ಬಾಂಬ್‌ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ವರ ಗಿಫ್ಟ್‌ ತೆಗೆದ ವೇಳೆ ಬಾಂಬ್‌ ಬ್ಲಾಸ್ಟ್ ಆಗಿದೆ. ಪಕ್ಕದಲ್ಲೇ ಕುಳಿತಿದ್ದ ಅಜ್ಜಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಉಡುಗೊರೆ ನೀಡಿದ ವ್ಯಕ್ತಿಗಾಗಿ ಶೋಧಕಾರ್ಯ ಚುರುಕುಗೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com