ಹೆಬ್ಬೆಟ್ಟಿನ ಸಹಿಗಾಗಿ ಮೃತ ವ್ಯಕ್ತಿಯ ದೇಹವನ್ನೇ ಗುಂಡಿಯಿಂದ ಹೊರತೆಗೆದ ಪಾರ್ಟ್‌ನರ್ಸ್‌!!

ಮೈಸೂರು : ಹೆಬ್ಬೆಟ್ಟಿನ ಸಹಿಗಾಗಿ ಹೃದಯಾಘಾತದಿಂದ ಸಾವಿಗೀಡಾದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಶವವನ್ನು ಹೊರತೆಗೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಶ್ರೀಕಂಟ ಪ್ರಸಾದ್‌ ಅಲಿಯಾಸ್‌ ಪಕ್ಕಿ ಶುಕ್ರವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಸಂಪ್ರದಾಯದಂತೆ ಅವರ ದೇಹವನ್ನು ಸ್ಮಶಾನದಲ್ಲಿ ಹೂಳಲಾಗಿತ್ತು.
ಆದರೆ ಮಧ್ಯರಾತ್ರಿ ಕಿಡಿಗೇಡಿಗಳು ಮೃತರ ದೇಹವನ್ನು ಹೊರತೆಗೆದು ಹೆಬ್ಬೆಟ್ಟಿನ ಸಹಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಪಕ್ಕಿ ಅವರ ಜೊತೆಗಿದ್ದ ವ್ಯಕ್ತಿಗಳೇ ಈ ಕೆಲಸ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಪಕ್ಕಿ ಅವರ ಜೊತೆ ಕೆಲವರು ಭೂಮಿಯ ವಿಚಾರವಾಗಿ ವ್ಯವಹಾರ ನಡೆದಿತ್ತು. ಆದರೆ ಈ ವ್ಯವಹಾರ ಪತ್ರಗಳಿಗೆ ಪಕ್ಕಿ ಸಹಿ ಹಾಕಿರಲಿಲ್ಲ. ಸಹಿ ಹಾಕುವುದಕ್ಕೂ ಮುನ್ನ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಹಿ ಹಾಕುವ ಸಲುವಾಗಿ ಮೃತದೇಹವನ್ನು ಹೊರತೆಗೆದಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com