ಈ ಕಾಂಗ್ರೆಸ್‌ನವ್ರು ಸುಮ್ನೆ ರಾಹುಲ್ ಗಾಂಧಿನ ಹೊತ್ಕೊಂಡು ಸುತ್ತಾಡ್ತಾರೆ : ಶೆಟ್ಟರ್

ಹುಬ್ಬಳ್ಳಿ : ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂಬಯಿ ಕರ್ನಾಟಕ ಪ್ರವಾಸದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ರಾಜ್ಯಕ್ಕೆ ಎಷ್ಟು ಬಾರಿ ಬಂದರೂ ಪ್ರಯೋಜನ ಆಗಲ್ಲ. ಅವರು ಹೋದಲ್ಲೆಲ್ಲ ಬಿಜೆಪಿಗೆ ಪ್ಲಸ್ ಆಗಿದೆ. ಅವರು ಪ್ರಚಾರ ಮಾಡಿದಲ್ಲೆಲ್ಲ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಎಐಸಿಸಿ ಅಧ್ಯಕ್ಷರಾದ ಕಾರಣ ಅನಿವಾರ್ಯವಾಗಿ ಪ್ರಚಾರ ಮಾಡಲೆಬೇಕು. ಕಾಂಗ್ರೆಸ್‌ನವರು ರಾಹುಲ್ ಗಾಂಧಿಯವರನ್ನು ಹೊತ್ತುಕೊಂಡು ಸುಮ್ಮನೆ ಓಡಾಡುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿ ವಿಚಾರ ಸಂಬಂಧ ಮಾತನಾಡಿದ್ದು, ಕರ್ನಾಟಕಕ್ಕೆ ಹನಿ ನೀರು ಬಿಡಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದರು.
ಮಹದಾಯಿ ವಿಚಾರದಲ್ಲಿ ತಮ್ಮ ನಿಲುವನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು. ಮಹದಾಯಿ ವಿಷಯದಲ್ಲಿ ಅಡ್ಡಗಾಲು ಹಾಕದಂತೆ ಗೋವಾ ಕಾಂಗ್ರೆಸ್‌ಗೆ ಡೈರೆಕ್ಷನ್ ಕೊಡಬೇಕು.
ಇಲ್ಲದಿದ್ದರೆ ಕಾಂಗ್ರೆಸ್ ನಾಟಕ ಮಾಡುತ್ತಿರುವುದು ಸ್ಪಷ್ಟವಾಗುತ್ತೆ. ಕಾಂಗ್ರೆಸ್ ಸರ್ಕಾರದ್ದು ಗೂಂಡಾ ಸಂಸ್ಕೃತಿ. ಸದನದ ಒಳಗೂ ಹೊರಗೂ ಕಾಂಗ್ರೆಸ್‌ನವರ ಗೂಂಡಾಗಿರಿ ಮಿತಿಮೀರಿದೆ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.