ಹರಿಯಾಣ ಶಾಲೆಗಳಲ್ಲಿ ಗಾಯಿತ್ರಿ ಮಂತ್ರ ಪಠಣೆ ಕಡ್ಡಾಯಕ್ಕೆ ನಿರ್ಧಾರ…?

ಚಂಢೀಗಡ : ಹರಿಯಾಣದ ಶಾಲೆಗಳಲ್ಲಿ ಬೆಳಗ್ಗೆ ಪ್ರಾರ್ಥನೆ ವೇಳೆ ಗಾಯಿತ್ರಿ ಮಂತ್ರ ಪಠಣವನ್ನು ಕಡ್ಡಾಯ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಮಕ್ಕಳೂ ಸಹ ಅದನ್ನು ಅರ್ಥಮಾಡಿಕೊಳ್ಳಲಿ ಎಂಬ ಕಾರಣಕ್ಕೆ ಗಾಯತ್ರಿ ಮಂತ್ರ ಹೇಳಿಸಲು ನಿರ್ಧರಿಸಿರುವುದಾಗಿ ಶಿಕ್ಷಣ ಸಚಿವ ರಾಮ್‌ ವಿಲಾಸ್‌ ಶರ್ಮಾ ತಿಳಿಸಿದ್ದಾರೆ.

ಸಂತರು ಹಾಗೂ ಋಷಿಗಳು ಗಾಯತ್ರಿ ಮಂತ್ರವನ್ನು ಜಗತ್ತಿಗೆ ಕೊಡಿುಗೆಯಾಗಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.

ಶಾಲೆಗಳಲ್ಲಿ ಮಕ್ಕಳು ಗಾಯತ್ರಿ ಮಂತ್ರವನ್ನು ಕಲಿಯುತ್ತಾರೆ ಎಂಬ ವಿಶ್ವಾಸವಿದೆ. ಶಿಕ್ಷಣದ ಗುಣಮಟ್ಟ, ನೈತಿಕತೆ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂಬ ಉದ್ದೇಶ ನಮ್ಮದು. ಆ ಕಾರಣಕ್ಕಾಗಿ ಗಾಯತ್ರಿ ಮಂತ್ರವನ್ನು ಕಡ್ಡಾಯ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com