Vijay Hazare Trophy : ಮಹಾರಾಷ್ಟ್ರ ವಿರುದ್ಧ ಗೆಲುವು, ಫೈನಲ್ ತಲುಪಿದ ಕರ್ನಾಟಕ

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಮಹಾರಷ್ಟ್ರ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿದ ಕರ್ನಾಟಕ ಫೈನಲ್ ತಲುಪಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಮಹಾರಾಷ್ಟ್ರ 44.3 ಓವರುಗಳಲ್ಲಿ 160 ರನ್ ಕ್ಕೆ ಆಲೌಟ್ ಆಯಿತು. ಮಹಾರಾಷ್ಟ್ರ ಪರವಾಗಿ ಶ್ರೀಕಾಂತ್ ಮುಂಡೆ 50 ಹಾಗೂ ನೌಶಾದ್ ಶೇಖ್ 42 ರನ್ ಗಳಿಸಿದರು. ಕರ್ನಾಟಕದ ಕೆ. ಗೌತಮ್ 3 ಹಾಗೂ ಪ್ರಸಿಧ್ ಕೃಷ್ಣಾ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಕರ್ನಾಟಕ 30.3 ಓವರುಗಳಲ್ಲಿ 1 ವಿಕೆಟ್ ಮಾತ್ರ ಕಳೆದುಕೊಂಡು 164 ರನ್ ಸೇರಿಸಿ ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟ್ಸಮನ್ ಗಳಾದ ಮಯಂಕ್ ಅಗರವಾಲ್ 81 ಹಾಗೂ ಕರುಣ್ ನಾಯರ್ 70 ರನ್ ಗಳಿಸಿದರು.

ಭಾನುವಾರ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆಂಧ್ರ ಹಾಗೂ ಸೌರಾಷ್ಟ್ರ ತಂಡಗಳು ಸೆಣಸಾಡಲಿವೆ. ಫೈನಲ್ ಪಂದ್ಯ ಮಂಗಳವಾರ ಫೆಬ್ರುವರಿ 27 ರಂದು ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com