ತ್ರಿವರ್ಣ ದ್ವಜದ ಕೇಸರಿ ಇಡೀ ಬಾವುಟಕ್ಕೆ ಹರಡಬಾರದು : ವಿವಾದ ಹುಟ್ಟುಹಾಕಿದ ಕಮಲ್‌ ಹಾಸನ್‌

ಚೆನ್ನೈ : ತ್ರಿವರ್ಣ ಧ್ವಜದಲ್ಲಿ ಕೇಸರಿಯಿದೆ. ಆದರೆ ಅದು ಇಡೀ ಧ್ವಜವನ್ನು ಆವರಿಸಬಾರದು ಎಂದು ಮಕ್ಕಳ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ, ನಟ ಕಮಲ್‌ ಹಾಸನ್‌ ಹೇಳಿದ್ದು, ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ತಮಿಳಿನ ವಾರಪತ್ರಿಕೆ ಆನಂದ ವಿಕಟಂ ಗೆ ಕಮಲ್‌ ಹಾಸನ್‌ ಅಂಕಣ ಬರೆದಿದ್ದು, ಅದರಲ್ಲಿ ನನ್ನ ರಾಜಕೀಯ ಜಾತಿ ಮತ್ತು ಧರ್ಮಗಳಿಂದ ಮುಕ್ತವಾಗಿದೆ. ಹಾಗಂತ ನಾನು ಹಿಂದೂ ಧರ್ಮದ ವಿರೋಧಿ ಅಲ್ಲ. ತ್ರಿವರ್ಣ ಧ್ವಜದಲ್ಲಿ ಕೇಸರಿಗೂ ಸ್ಥಾನವಿದೆ. ಆದರೆ ಅದು ಇಡೀ ಧ್ವಜವನ್ನು ಪಸರಿಸಬಾರದು ಎಂದಿದ್ದಾರೆ.

ಇತರರಿಗೂ ಸ್ಥಳಾವಕಾಶ ನೀಡಬೇಕು. ಗೌರವ ನೀಡಬೇಕು. ನಾನು ಮಾಡಿರುವುದು ಇದೇ ರೀತಿಯ ಶಪಥ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com