ನುಡಿದಂತೆ ನಡೆದ ಸರ್ಕಾರ ನಿಮ್ಮ ಸಿದ್ದರಾಮಯ್ಯ ಸರ್ಕಾರ : ರಾಹುಲ್‌ ಗಾಂಧಿ

ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಜನಾಶಿರ್ವಾದ ಯಾತ್ರೆ ಮುಂದುವರಿದಿದೆ. ಶನಿವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅಥಣಿಗೆ  ಭೇಟಿ ನೀಡಿದ್ದು, ಬಸವಣ್ಣನವರ ವಚನದೊಂದಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಬಸವಣ್ಣನವರು ಹೇಳಿದಂತೆ ನುಡಿದಂತೆ ನಡೆದ ಸರ್ಕಾರ ಈ ಸಿದ್ದರಾಮಯ್ಯ ಸರ್ಕಾರ. ಕಾಂಗ್ರೆಸ್‌ ಪಕ್ಷ ತಾನು ಜನರಿಗೆ ಭರವಸೆ ನೀಡಿದಂತೆ ನಡೆದುಕೊಂಡಿದೆ. ಪ್ರದಾನಿ ಮೋದಿ ಬಡವರಿಗೆ 15 ಲಕ್ಷ ನೀಡುತ್ತೇನೆ ಎಂದು ಸುಳ್ಳು ಹೇಳಿದದಾರೆ. ಆದರೂ ಬಸವಣ್ಣನವರ ಮಾತನ್ನು ಹೇಳಿದ್ದರು. ಆದರೆ ಅದರಂತೆ ಅವರು ನಡೆದುಕೊಂಡಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರ ಇದೆ ಎಂದು ಮೋದಿ ಹೇಳುತ್ತಾರೆ. ಆದರೆ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದ ಸಿದ್ದರಾಮಯ್ಯ ಅಲ್ಲ, ಯಡಿಯೂರಪ್ಪ. ಗುಜರಾತ್‌ನಲ್ಲಿ ದಲಿತರ, ಅಲ್ಪಸಂಖ್ಯಾತರ ಹತ್ಯೆಯಾಗುತ್ತಿದೆ. ಅದಕ್ಕೆ ಮೂಲ ಕಾರಣ ಬಿಜೆಪಿ ಎಂದಿದ್ದಾರೆ.

ದೇಶದ ಗೃಹ ಮಂತ್ರಿಗಳು ಏನೂ ಕೆಲಸ ಮಾಡುತ್ತಿಲ್ಲ. ಎಲ್ಲವನ್ನೂ ಮೋದಿಯೇ ಮಾಡುತ್ತಿದ್ದಾರೆ. ಇನ್ನು ಕರ್ನಾಟದಲ್ಲಿ ಐದು ವರ್ಷದಲ್ಲಿ ಅಭಿವೃದ್ಧಿ ಪ್ರಮಾಣ ಹೆಚ್ಚಿದೆ. ಅದನ್ನು ನೋಡಿ ಮೋದಿ ಕಲಿಯಲಿ ಎಂದಿದ್ದಾರೆ.

Leave a Reply

Your email address will not be published.