Uttar Pradesh : ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವತಿಯ ಕೊಲೆ..!

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 18 ವರ್ಷದ ಯುವತಿಯನ್ನು ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುವಾರ ಸಾಯಂಕಾಲ ನಡೆದಿದೆ.

ಕೊಲೆಯಾದ ಯುವತಿ ಗುರುವಾರ 4.30 ರ ಸುಮಾರಿಗೆ ತರಕಾರಿ ತರಲೆಂದು ಮನೆಯಿಂದ ಮಾರುಕಟ್ಟೆಗೆ ಸೈಕಲ್ ಮೇಲೆ ಹೊರಟಿದ್ದಾಳೆ. ಮಾರ್ಗ ಮಧ್ಯದಲ್ಲಿ ಆಕೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಲಖ್ನೋದ ಐಜಿಪಿ ಸುಜಿತ್ ಪಾಂಡೆ ‘ ಕೊಲೆ ನಡೆದಿರಬಹುದು ಎಂದು ತೋರುತ್ತದೆ. ಘಟನೆ ನಡೆದ ಸ್ಥಳದಿಂದ ಆಕೆಯ ಮೃತದೇಹ, ದುಪಟ್ಟಾ, ಸೈಕಲ್, ಸ್ಲಿಪ್ಪರ್ ಗಳನ್ನು ವಶ ಪಡಿಸಿಕೊಂಡಿದ್ದೇವೆ. ತನಿಖೆ ಜಾರಿಯಲ್ಲಿದ್ದು ಅಪರಾಧಿಗಳಿಗಾಗಿ ಹುಡುಕಾಟ ಜಾರಿಯಲ್ಲಿದೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com