ಶಾಸಕ ಹ್ಯಾರಿಸ್‌ ಪುತ್ರ ನಲಪ್ಪಾಡ್‌ ಒಬ್ಬ ಸೈಕೋಪಾತ್‌ : ಶ್ರೀರಾಮುಲು

ಬೆಂಗಳೂರು : ಲೋಕನಾಥ್‌ ಪುತ್ರ ವಿದ್ವತ್‌ ನನ್ನ ಸ್ನೇಹಿತ. ಆತನ ಮಗನ ಮೇಲೆ ದಾಳಿ ಮಾಡಿರುವ ಶಾಸಕ ಹ್ಯಾರಿಸ್ ಪುತ್ರ ನಲಪ್ಪಾಡ್‌ ಸೈಕೋಪಾತ್‌ ಇರಬೇಕು ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಹೇಳಿದ್ದಾರೆ.
ಗುರುವಾರ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್‌ನ ಸ್ಥಿತಿಗತಿ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ರಾಜ್ಯದಲ್ಲಿ ಕಾಂಗ್ರೆಸ್‌ ಮಂತ್ರಿಗಳು, ಶಾಸಕರು, ಅವರ ಮಕ್ಕಳು ಗೂಂಡಾಗಿರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ಬಗ್ಗೆ ವಿದ್ವತ್‌ ತಂದೆ ಲೋಕನಾಥ್‌ ಜೊತೆ ಮಾತುಕತೆ ನಡೆಸಿದ್ದೇನೆ. ನಲಪ್ಪಾಡ್ ಸೈಕೋಪಾತ್‌ ಇರಬೇಕು. ಆತನಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಈ ಹಿಂದೆ ಸಹ ಈ ರೀತಿಯ ಘಟನೆ ನಡೆದಿದೆ. ಆದ್ದರಿಂದ ನಲಪ್ಪಾಡ್‌ ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com