ಸಟ್ಟೇರುವುದಕ್ಕೂ ಮುನ್ನ ಹೊಸ ದಾಖಲೆ ಬರೆದ ಕಿಚ್ಚನ ‘ಕೋಟಿಗೊಬ್ಬ – 3’

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಮಹೂರ್ತಕ್ಕೂ ಮುನ್ನವೇ ಭಾರೀ ಬೇಡಿಕೆ ಸೃಷ್ಠಿಸಿದೆ.
ಮೊದಲ ಬಾರಿಗೆ ಕೋಟಿಗೊಬ್ಬ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್‌ ಅಭಿನಯಿಸಿದ್ದರು. ಅದಾದ ಬಳಿಕ ಕೋಟಿಗೊಬ್ಬ 2 ಸಿನಿಮಾದಲ್ಲಿ ಸುದೀಪ್‌ ನಟಿಸಿದ್ದು, ಆ ಸಿನಿಮಾ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು. ಆ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಕೋಟಿಗೊಬ್ಬ 3 ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ.


ಸದ್ಯ ಸುದೀಪ್‌ ಪೈಲ್ವಾನ್‌ ಸಿನಿಮಾದ ತಯಾರಿ ನಡೆಸುತ್ತಿದ್ದು, ಈ ಮಧ್ಯೆಯೇ ಕೋಟಿಗೊಬ್ಬ-3 ಸಿನಿಮಾ ಸೆಟ್ಟೇರಲಿದೆ. ಮಾರ್ಚ್‌ 2ರಂದು ಚಿತ್ರದ ಮಹೂರ್ತ ನೆರವೇರಲಿದ್ದು, ಸೂರಪ್ಪ ಬಾಬು ಈ ಚಿತ್ರದ ನಿರ್ಮಾಣ ಮಾಡಲಿದ್ದಾರೆ. ಶಿವಕಾರ್ತಿಕ್‌ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಅರ್ಜುನ್ಯ ಜನ್ಯ ಸಂಗೀತ ನಿರ್ದೇಶನವಿರುವ ಈ ಸಿನಿಮಾದ ಆಡಿಯೋದ ಹಕ್ಕನ್ನು ಆನಂದ್‌ ಆಡಿಯೋ ಸಂಸ್ಥೆ ಖರೀದಿಸಿದ್ದು, ಮಹೂರ್ತಕ್ಕೂ ಮೊದಲೇ ಆಡಿಯೋ ರೈಟ್ಸ್‌ ಖರೀದಿಸಿರುವುದು ವಿಶೇಷ.

Leave a Reply

Your email address will not be published.