ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಪ್ರಕಾಶ್‌ ಜಾವ್ಡೇಕರ್

ಬೆಂಗಳೂರು : ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಕಾದಿದೆ. ಪದವಿ ಪಡೆದು ಅತಂತ್ರರಾಗಿರುವ ವಿದ್ಯಾರ್ಥಿಗಳು ಭಯವನ್ನು ಹೋಗಲಾಡಿಸುವ ಸಲುವಾಗಿ, ಮುಕ್ತ ವಿವಿಯ ಬಿಕ್ಕಟ್ಟನ್ನು ಇತ್ಯರ್ಥಪಡಿಸಿ ಹೊಸ ಮಾರ್ಗ ಸೂಚಿಗಳೊಂದಿಗೆ ಮತ್ತೆ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ನೀಡುವುದಾಗಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.
ಎಲ್ಲಾ ಗೊಂದಲಗಳನ್ನೂ ಬಗೆಹರಿಸಿಪದವಿ ಮುಗಿಸಿದ ವಿದ್ಯಾರ್ಧಿಗಳಿಗೆ ಬ್ರಿಡ್ಜ್‌ ಕೋರ್ಸ್‌ ನಡೆಸಲಾಗುವುದು. ಪದವಿ ಕೋರ್ಸ್‌ ಮುಗಿಸಿದ್ದಾರೆಯೇ ಇಲ್ಲವೇ ಎಂದು ತಿಳಿಯಲು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಬಳಿಕ ಪದವಿ ಪ್ರಧಾನ ಮಾಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮುಂದಿನ ವಾರ ದೆಹಲಿಯಲ್ಲಿ ಸಭೆ ನಡೆಸಿ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com