‘ ರಾಗಾ ಬಚ್ಚಾ ‘ ಅಂದಿದ್ದು BSY ಗೆ ಶೋಭೆಯಲ್ಲ, ಮಾತು ಹಿಡಿತದಲ್ಲಿದ್ದರೆ ಒಳ್ಳೆಯದು : ಡಿಕೆಶಿ

ವಿಜಯಪುರದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ ಹೇಳಿಕೆ ನೀಡಿದ್ದು, ಬಿಎಸ್ವೈ ಗೆ ಪವರ್ ಮಿನಿಸ್ಟರ್ ಟಾಂಗ್ ನೀಡಿದ್ದಾರೆ. ಬಿಎಸ್ವೈ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಚ್ಚಾ ಎಂದಿದ್ದರು.

‘ ಬಿಎಸ್ವೈ ಮಾತುಗಳು ಹಿಡಿತದಲ್ಲಿದ್ರೆ ಒಳ್ಳೆಯದು. ಬಿಎಸ್ವೈಗೆ ಇದು ಶೋಭೆ ಅಲ್ಲ. ರಾಜ್ಯದ ಜನತೆಗೆ ಹಾಗೂ ಕಾಂಗ್ರೆಸ್ ಗೆ ಬಿ.ಎಸ್. ಯಡಿಯೂರಪ್ಪ ಕ್ಷಮೆ ಕೇಳಬೇಕು. ಹಿರಿಯರಾಗಿರು ಬಿಎಸ್ವೈ ರಾಗಾಗೆ ಬಚ್ಚಾ ಎನ್ನುವುದು ಅವರ ವಯಸ್ಸಿಗೆ, ಅಧಿಕಾರಕ್ಕೆ, ಪಕ್ಷಕ್ಕೆ ಶೋಭೆ ತರುವುದಿಲ್ಲ.

‘ ಪಕೋಡಾ ಮಾರಿಕೊಂಡು ಜೀವನ ಮಾಡಿ ಎಂದಿದ್ದು ನಾಚಿಕೆಗೇಡು. ಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಯುವಕರು ಧಂಗೆ ಏಳ್ತಾರೆ ‘ ಎಂದು ಹೇಳಿದ್ದಾರೆ.

 

 

Leave a Reply

Your email address will not be published.