ಆರಂಭಕ್ಕೂ ಮುನ್ನ ದರ್ಶನ್‌ ಅಭಿನಯದ ಒಡೆಯರ್‌ಗೆ ಎದುರಾಯ್ತು ವಿಘ್ನ !

ಬೆಂಗಳೂರು : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಒಡೆಯರ್‌ ಸಿನಿಮಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ದರ್ಶನ್‌ ಅವರ ಒಡೆಯರ್‌ ಸಿನಿಮಾದ ಈ ಶೀರ್ಷಿಕೆಗೆ ಮೈಸೂರಿನ ಕನ್ನಡ ಕ್ರಾಂತಿ ದಳ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸಂಗಟನೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಈ ಶೀರ್ಷಿಕೆಯನ್ನು ಹಿಂಪಡೆಯದಿದ್ದಲ್ಲಿ ಬೆಂಗಳೂರಿನಲ್ಲಿ ದರ್ಶನ್‌ ಅವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಮೈಸೂರಿನ ಒಡೆಯರ್‌ ವಂಶಸ್ಥರು ಕನ್ನಡ ನಾಡು-ನುಡಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಅವರ ಹೆಸರಿನಲ್ಲಿ ಕಮರ್ಷಿಯಲ್‌ ಸಿನಿಮಾ ಮಾಡುವುದು. ಸರಿಯಲ್ಲ. ಆದ ಕಾರಣ ಈ ಶೀರ್ಷಿಕೆಗೆ ನಮ್ಮ ವಿರೋಧವಿದೆ ಎಂದಿದ್ದಾರೆ.
ಸದ್ಯ ದರ್ಶನ್‌ ಯಜಮಾನ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ಅವರ ಹುಟ್ಟುಹಬ್ಬದ ದಿನದಂದೇ ಒಡೆಯರ್‌ ಚಿತ್ರದ ಶೀರ್ಷಿಕೆ ಬಹಿರಂಗವಾಗಿತ್ತು. ಈ ಸಿನಿಮಾಗೆ ಎಂ.ಡಿ ಶ್ರೀಧರ್‌ ಅವರು ಆ್ಯಕ್ಷನ್‌ ಕಟ್ ಹೇಳಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com