ಮೋದಿ ಮಂತ್ರದಂಡ ರಾಜ್ಯದಲ್ಲಿ ಕೆಲಸ ಮಾಡಲ್ಲ : H.D ಕುಮಾರಸ್ವಾಮಿ

ಚಿಕ್ಕಮಗಳೂರು : ಬಜೆಟ್ ಸೇರಿದಂತೆ ಯಾವುದೇ ಕಲಾಪಗಳಲ್ಲಿಯೂ ನಾನು ಭಾಗವಹಿಸಿಲ್ಲ. ರಾಜ್ಯದ ಸಮಸ್ಯೆಗಳಿಗೆ ಸರ್ಕಾರ ಎಷ್ಟರ ಮಟ್ಟಿಗೆ ಬಗೆಹರಿಸಿದೆ ಎಂಬುದು ನನಗೆ ಗೊತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇವತ್ತು ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ ಮಾಡುತ್ತಿವೆ. ಈ ಬಾರಿಯ ಬಜೆಟ್ ನ ಬಗ್ಗೆಯೂ ನನಗೆ ಅರಿವಿದೆ. ನಿನ್ನೆ ಸಿಎಂ ಭಾಷಣ ಮಾಡಿದ್ದು ವಿದೇಶದಲ್ಲಿಯೋ ನಮ್ಮ ದೇಶದಲ್ಲಿಯೋ ಗೊತ್ತಿಲ್ಲ. ನಿನ್ನೆಯ ಸಿ ಎಂ ಭಾಷಣ ಯಾವುದೋ ಸುಭ್ರಾಯಕಟ್ಟೆ ಭಾಷಣ ಎಂಬಂತೆ ಇದೆ. ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಸಮಸ್ಯೆಗೆ ಸ್ಪಂದಿಸದೇ ಕ್ಷುಲ್ಲಕ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಇವತ್ತು ಸರ್ಕಾರ ಯಾವುದೇ ಯೋಜನೆ ಪೂರೈಸಿಲ್ಲ. ನಾನು ಸದನದಲ್ಲಿ ಭಾಗವಹಿಸದೇ ಇದ್ದರೂ ಅಲ್ಲಿನ ಚರ್ಚೆಗಳ ಬಗ್ಗೆ ಗಮನಹರಿಸಿದ್ದೇನೆ. ಈ ಕಾರಣದಿಂದಲೇ ನಾನು ವಿಧಾನಸಭೆಯಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.

ರಾಜ್ಯದ ಜನರ ತೆರಿಗೆ ಹಣದಲ್ಲಿ ರಾಜ್ಯ ಸರ್ಕಾರ ಚುನಾವಣೆ ಮಾಡಲು ಹೊರಟಿದೆ ಎಂದು ಆರೋಪಿಸಿರುನವ ಎಚ್‌ಡಿಕೆ, ಈ ಸರ್ಕಾರ ಕೇವಲ ಜಾಹಿರಾತಿನ ಸರ್ಕಾರ. ಎರಡು ರಾಷ್ಟ್ರೀಯ ಪಕ್ಷಗಳ‌ು ಪರ್ಸೆಂಟೇಜ್ ರಾಜಕೀಯ ಮಾಡುತ್ತಿದ್ದಾರೆ. ಇದರ ಬದಲು ರಾಜ್ಯದ ಅಭಿವೃದ್ದಿ ಮಾಡಬಹುದಿತ್ತು. ಇದು ಕೇವಲ ಗುತ್ತಿಗೆದಾರರ ಸರ್ಕಾರ. ನರೇಂದ್ರ ಮೋದಿ ರಾಜ್ಯದಲ್ಲಿ ಎರಡು ಭಾರಿ ಭಾಷಣ ಮಾಡಿದ್ದಾರೆ. ಅವರ ಭಾಷಣದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಕೊಡುಗೆ ಬಗ್ಗೆ ಮಾತನಾಡಿಲ್ಲ. ಮೋದಿ ಭಾಷಣದಲ್ಲಿ ಕೇವಲ ರಾಹುಲ್ ಗಾಂಧಿ, ಸಿದ್ದರಾಮಯ್ಯನನ್ನು ತೆಗಳಿದ್ದಷ್ಟೇ, ರಾಹುಲ್ ಗಾಂಧಿ ಮೋದಿಯನ್ನು ತೆಗಳಲು ವೇದಿಕೆ ಸೃಷ್ಟಿಸಿಕೊಂಡಿದ್ದಾರೆ. ಇವರ ಭಾಷಣದಲ್ಲಿ ರಾಜ್ಯದ ಅಭಿವೃದ್ದಿ ಬಗ್ಗೆ ಏನು ಮಾತನಾಡಿಲ್ಲ. ಮೋದಿ ಮಂತ್ರದಂಡ ರಾಜ್ಯದಲ್ಲಿ ನಡೆಯುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com