ವೃದ್ದ ಸೇರಿದಂತೆ ಆರು ಮಂದಿಯಿಂದ ಅಪ್ತಾಪ್ತೆ ಮೇಲೆ ಅತ್ಯಾಚಾರ : ಗರ್ಭಿಣಿಯಾದ ಬಾಲಕಿ

ಭೋಪಾಲ್‌ : 70 ವರ್ಷದ ವೃದ್ದ ಸೇರಿದಂತೆ ಆರು ಮಂದಿ ಕಮುಕರು ಅಪ್ರಾಪ್ತೆ ಮೇಲೆ ಆರು ತಿಂಗಳಿನಿಂದ ಅತ್ಯಾಚಾರವೆಸಗುತ್ತಿದ್ದ ಆಘಾತಕಾರಿ ಸಂಗತಿ ಈಗ ಬೆಳಕಿಗೆ ಬಂದಿದೆ.
ಬಾಲಕಿ ಈಗ ಗರ್ಭಿಣಿಯಾಗಿದ್ದು ಪೋಷಕರಿಗೆ ವಿಚಾರ ತಿಳಿದ ಬಳಿಕ ವಿಷಯ ಬಹಿರಂಗಗೊಂಡಿದೆ. ಮಗಳನ್ನು ಈ ಸ್ಥಿತಿಗೆ ತಳ್ಳಿದ ಕಾಮುಕರ ವಿರುದ್ದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿ ವೃದ್ದನನ್ನು ಸುಖ್‌ದೇವ್‌ ತಿವಾರಿ ಎಂದು ಗುರುತಿಸಲಾಗಿದ್ದು, ಈತ ತಲೆಮರೆಸಿಕೊಂಡಿದ್ದಾನೆ. ಇನ್ನುಳಿದ ಆರೋಪಿ ರಜಾಕ್‌, ಸೋನು, ರಾಜ್‌ ಕುಮಾರ್‌, ರವಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಅತ್ಯಾಚಾರಕ್ಕೊಳಗಾದ ವಿಷಯ ತಿಳಿದ ಕಾಮುಕ ಆಕೆಯನ್ನು ಹೆದರಿಸಿ ಅತ್ಯಾಚಾರವೆಸಗಿದ್ದ. ಬಳಿಕ ಈ ವಿಚಾರವನ್ನು ತನ್ನ ಸ್ನೇಹಿತನಿಗೆ ಹೇಳಿದ್ದಾನೆ. ತನ್ನ ಜೊತೆ ಸಹಕರಿಸದಿದ್ದರೆ ನಿನ್ನ ಮೇಲೆ ನಡೆದ ಅತ್ಯಾಚಾರವನ್ನು ಎಲ್ಲರಿಗೂ ಹೇಳುವುದಾಗಿ ಹೆದರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ತಿಳಿದುಬಂದಿದೆ.

Leave a Reply

Your email address will not be published.