ಪತ್ನಿಯ ಮುಖಕ್ಕೆ ಸ್ಪ್ರೇ ಹೊಡೆದು ಪಾನಿಪೂರಿ ವ್ಯಾಪಾರಿಯನ್ನು ಬರ್ಬರವಾಗಿ ಕೊಂದ್ಬಿಟ್ರು ಪಾಪಿಗಳು!

ಬೆಂಗಳೂರು : ಮನೆಗೆ ನುಗ್ಗಿದ ದುಷ್ಕಮಿಗಳು ಪಾನಿಪೂರಿ ವ್ಯಾಪಾರಸ್ಥನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯ ನ್ನು ನರಸಿಂಹ ಎಂದು ಹೆಸರಿಸಲಾಗಿದೆ. ಕುರುಬರಹಳ್ಳಿಯಲ್ಲಿ ರಾತ್ರಿ 10.30ರ ವೇಳೆಗೆ ಪತ್ನಿ ಜೊತೆ ನರಸಿಂಹ ಮಲಗಿದ್ದರು. ಈ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿಯ ಮುಖಕ್ಕೆ ಸ್ಪ್ರೇ ಸಿಂಪಡಿಸಿ ಬಳಿಕ ನರಸಿಂಹರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಅವರ ದೇಹವನ್ನು ಮೂಟೆಕಟ್ಟಿ ಎಸೆದಿದ್ದಾರೆ.

ಬೆಳಗ್ಗೆ ಎದ್ದ ಪತ್ನಿಗೆ ಪತಿಯ ಹತ್ಯೆಯಾಗಿರುವ ವಿಚಾರ ತಿಳಿದಿದೆ. ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com