ಸಾಮಾನ್ಯ ಕುರುಬರು ಸಿದ್ದರಾಮಯ್ಯ ಜೊತೆಗಿಲ್ಲ, ನಮ್ಮೊಂದಿಗಿದ್ದಾರೆ : ಎಚ್. ವಿಶ್ವನಾಥ್

ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಎಚ್. ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ ಬಜೆಟ್ ನಲ್ಲಿ ೧೦೦ ಹೊಸ ಪಬ್ಲಿಕ್ ಶಾಲೆ ಆರಂಭಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಆದರೆ ತಲಾ ೫ ಲಕ್ಷ ರೂ. ಮೀಸಲು ಇಟ್ಟಿದ್ದೀರಿ ‘ ಎಂದಿದ್ದಾರೆ.

‘ ೫ ಲಕ್ಷ ರೂ.ಗಳಲ್ಲಿ ಪಬ್ಲಿಕ್ ಶಾಲೆ ತೆರೆಯಲು ಸಾಧ್ಯವೇ ? ಜನರನ್ನು ನೀವು ಮೂರ್ಖರು ಅಂದುಕೊಂಡಿದ್ದೀರ. ಯು ಆರ್ ಎ ಫೂಲ್. ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ. ಮುಖ್ಯಮಂತ್ರಿ ಯೊಂದಿಗೆ ಸಾಮಾನ್ಯ ಕುರುಬ ಇಲ್ಲ. ಇವರ ಜೊತೆ ಈಗ 5 ಸ್ಟಾರ್ ಕುರುಬರು ಮಾತ್ರ ಇದ್ದಾರೆ. ಸಾಮಾನ್ಯ ಕುರುಬರು ನಮ್ಮ ಜೊತೆ ಇದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯ ವಾಗಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣ ಇಲ್ಲ. ರಾಜ್ಯದ ಸುರಕ್ಷತೆ ಬಗ್ಗೆ ಅವರಿಗೆ ಗಮನ ಇಲ್ಲ. ಸಾಮಾನ್ಯ ಜನಕ್ಕೆ ಭದ್ರತೆ ಇಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಕಂಟ್ರಾಕ್ಟರ್ ಓರಿಯಂಟೆಡ್ ಗೌರ್ನಮೆಂಟ್. ಕೋಟಿ ಕೋಟಿ ಗುತ್ತಿಗೆ ಕೊಟ್ಟು ಕಂಟ್ರಾಕ್ಟರ್ ಗಳಿಂದ ಹಣ ಪಡೆಯುತ್ತಿದ್ದಾರೆ.

ಸಿದ್ದರಾಮಯ್ಯ ಹಣ ಬಿತ್ತಿ, ಹಣ ತೆಗೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಂದಲೇ ಕಾನೂನು ಉಲ್ಲಂಘನೆ ಆಗುತ್ತಿದೆ. ಗೃಹ ಮಂತ್ರಿಗೂ‌ ಬೆಲೆ ಇಲ್ಲ. ಅಧಿಕಾರ ನಡೆಸುತ್ತಿರುವವರೇ ಬೇರೆ. ಅಸಾಂವಿಧಾನಿಕ ಶಕ್ತಿ ಅಧಿಕಾರ ನಡೆಸುತ್ತಿದೆ ‘ ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಆರೋಪ ಮಾಡಿದ್ದಾರೆ.

ಒಬ್ಬ ಎಂಎಲ್ಎ ಮಗ ಹಫ್ತಾ ವಸೂಲು ಮಾಡುತ್ತಾರೆ ಅಂದ್ರೆ ಏನರ್ಥ. ಕಾನೂನು ಸುವ್ಯವಸ್ಥೆ ಹಾಳಾದರೆ ಕೈಗಾರಿಕೋದ್ಯಮ, ಪ್ರವಾಸೋದ್ಯಮ ಕುಸಿಯುತ್ತದೆ. ಇದರ ಬಗ್ಗೆ ಮಾತನಾಡದ ಸಿಎಂ ಸಿದ್ದರಾಮಯ್ಯ, ಭಾಗ್ಯಗಳ ಬಗ್ಗೆ ಮಾತನಾಡುತ್ತಾರೆ.

‘ ಸಿದ್ದರಾಮಯ್ಯ ಯು ಅರ್ ಫೂಲ್. ನಿವೋಬ್ಬ ಮುರ್ಖ. ದೇವೆಗೌಡ್ರು ನಿಮ್ಮನ್ನ ರಾಜಕೀಯ ಶಕ್ತಿ ತುಂಬಿದ್ರು. ನಿಮಗೆ ಕೃತಜ್ಞತೆ ಇಲ್ಲ ‘ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com