ಲಜ್ಜೆಗೆಟ್ಟ ಸಿದ್ದರಾಮಯ್ಯ ನೀನು ಖರ್ಚು ಮಾಡಿರೋ ಹಣದ ಲೆಕ್ಕಕೊಡು : BSY ವಾಗ್ದಾಳಿ

ಹಾವೇರಿ : ಹಾವೇರಿ ಪರಿಶಿಷ್ಟ ಸಮಾವೇಶದಲ್ಲಿ ದಲಿತರ ಹಣದಲ್ಲಿ ಸಾಲ ಮನ್ನಾ ಮಾಡಲುನಾಚಿಕೆ ಆಗುವುದಿಲ್ಲವೆ ನಿನಗೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಲಜ್ಜೆಗೆಟ್ಟ ಸಿದ್ದರಾಮಯ್ಯ ನೀನು ಖರ್ಚು ಮಾಡಿರುವ ಹಣದ ಲೆಕ್ಕ ನೀಡು. ಜನರ ಜೀವದ ಜೊತೆಗೆ ಚೆಲ್ಲಾಟ ಆಡುವ ನಿನ್ನ ಬಿಡುವುದಿಲ್ಲ. ಬೊಕ್ಕಸ ಕೊಳ್ಳೆ ಹೊಡೆಯಲು ಬಿಡುವುದಿಲ್ಲ.ಇದರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುವುದಾಗಿಹೇಳಿದ್ದಾರೆ.

ಪ್ರಚಾರಕ್ಕೆ ಕಾಂಗ್ರೆಸ್ ಬಜೆಟ್ ಮೊತ್ತ ಹೆಚ್ಚಳ ಮಾಡಿದೆ. ದಲಿತರಾಗಿರುವ ಪರಮೇಶ್ವರ ಅವರೆ, ದಲಿತರಿಗೆ ಆಗಿರುವ ಅನ್ಯಾಯ ಹೋರಾಟಕ್ಕೆ ಬನ್ನಿ. ರಾಹುಲ್ ಗಾಂಧಿ ಬಚ್ಚಾ. ನಿನಗೆ ಏಲ್ಲಿ ಇರುವುದಕ್ಕೆ ಜಾಗ ಇಲ್ಲ. ಅದಕ್ಕೆ ರಾಜ್ಯದಲ್ಲಿ ಭ್ರಷ್ಟ ಸಿ.ಎಂ.ನ ಇಟ್ಟುಕೊಂಡು ಓಡಾಡುತ್ತೀಯ.ದಲಿತರನ್ನು ರಾಷ್ಟ್ರಪತಿ ಮಾಡಿದ ಕಿರ್ತಿ ಬಿಜೆಪಿಗೆ ಸಲ್ಲುತ್ತದೆ.ರಾಜ್ಯದ ಮುಖ್ಯಮಂತ್ರಿಯಾದ ನೀನು ಹಗಲು ದರೋಡೆ ಮಾಡುತ್ತಿದ್ದೀಯ. ನಿನಗೆ ನಾಚಿಕೆಯಾಗಬೇಕು.ನೀನು ಏನು ಸತ್ಯ ಹರಿಚಂದ್ರನಾ? ನಿನ್ನ ರಾಹುಲ್ ಹಾಗೂ ಸೋನಿಯಾ ಗಾಂಧಿ ಬೇಲ್ ಮೇಲಿದ್ದಾರೆ.ನಾನು ಅಧಿಕಾರಕ್ಕೆ ಬಂದ ತಕ್ಷಣ ನೀನು ಮಾಡಿರುವ ಅವ್ಯವಹಾರ ಬಯಲಿಗೆ ತಂದು ನಿನ್ನನ್ನು ಜೈಲಿಗೆ ಅಟ್ಟುವೆಎಂದುಹರಿಹಾಯ್ದಿದ್ದಾರೆ.

Leave a Reply

Your email address will not be published.